ಚಾಮರಾಜನಗರ : ತಾಲೂಕಿನ ಭೋಗಾಪುರ ಬಳಿ ವಿಮಾನ ಪತನವಾಗಿ ಪೈಲೆಟ್ ಗಳು ಪ್ರಾಣಾಪಯದಿಂದ ಪಾರಗಿರುವ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದ ಬಳಿ ವಿಮಾನ ಪತನಗೊಂಡಿದೆ. ಇನ್ನು ವಿಮಾನದಲ್ಲಿದ್ದ ಇಬ್ಬರು ಫೈಲೈಟ್ ಗಳು ಪ್ಯಾರಾಚೂಟ್ ಬಳಸಿ ಅಪಾಯದಿಂದ ಪಾರಾಗಿದ್ದಾರೆ.
ಇನ್ನೂ ಪತನವಾದ ವಿಮಾನವನ್ನು ನೋಡಲು ಅಕ್ಕ ಪಕ್ಕದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.