ಮೈಸೂರು : ಹೊಸ ಪ್ರತಿಭೆಗಳಿಂದ ಕೂಡಿರುವ ದರ್ಬಾರ್ ಚಲನಚಿತ್ರವೂ ಇದೇ ಜೂನ್ 9ರಂದು ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಾಹಿತ್ಯಗಾರರದ ವಿ. ಮನೋಹರ್ ತಿಳಿಸಿದರು.
ಇಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾನಾಡಿದ ಅವರು ದರ್ಬಾರ್ ಚಿತ್ರ ಪ್ರಚಾರವನ್ನು ಮೈಸೂರುನಲ್ಲಿ ಮಾಡುತ್ತಿದ್ದು. ಈ ಚಿತ್ರ ದಲ್ಲಿ ಹಲವಾರು ಕಲಾ ಬಳಗ ಹಾಗೂ ರಂಗ ಕಲಾವಿದರ ತಂಡ ವನ್ನು ಹೊಂದಿದ್ದು, ಸಂತೋಷ್ ಕಾಮಿಡಿ ಕಿಲಾಡಿ ಅವರು ಈ ಚಿತ್ರದಲ್ಲಿ ಬಾಗಿಯಾಗಿದ್ದು ನಿರ್ದೇಶಕರು ಆದ ಸತೀಶ್ ಅವರ ಪರಿಚಯವಾಗಿತ್ತು ಮಾತನಾಡುತ್ತ ಒಂದು ಒಳ್ಳೆಯ ಕಥೆಯನ್ನು ತಿಳಿಸಿದ್ದರು ನಾನು ಪತ್ರಕರ್ತನಾಗಿ kartonist ಆಗಿ ಕೆಲಸ ಮಾಡಿರುವೆ ನನಗೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಮನೋಭಾವನೆ ಇತ್ತು ಆದರೆ ಆಗಿರಲಿಲ್ಲ. ಈ ಸಿನಿಮಾದಲ್ಲಿ 7 ಚರಣಗಳ ಹಾಡನ್ನು ಒಂದಿದೆ ನಾನು ಸಹಾ ಸಾಹಿತ್ಯ ಹಾಗೂ ನಿರ್ಮಾಪಕರಾಗಿ ಸೇವೆ ಮಾಡಲು ಅವಕಾಶವನ್ನು ಸಿಕ್ಕಿದ್ದೇ ಎಂದು ಹೇಳಿದರು.
ರಂಗಿತರಂಗ, ಒಂದು ಮೊಟ್ಟೆಯ ಕಥೆ,ಯು- ಟರ್ನ್, ಕೆಜಿಎಫ್, ಕಾಂತಾರದಂತಹ ಕೆಲವು ಚಿತ್ರಗಳು ಜನರ ಮನಸ್ಸನ್ನು ಗೆದ್ದವು. ಹೊಸಬರು ಮಾಡುವ ಹೊಸ ಪ್ರಯೋಗಗಳನ್ನು ಜನರು ಇಷ್ಟಪಟ್ಟಿದ್ದಾರೆ. ಅವುಗಳಲ್ಲಿ ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದುದರಿಂದ ಜನರು ಆ ಚಿತ್ರಗಳತ್ತ ಆಕರ್ಷಿತರಾದರು. ಇಂತಹ ಏರಿಳಿತಗಳು ಕನ್ನಡ ಚಿತ್ರರಂಗದಲ್ಲಿ ಉಂಟಾಗುತ್ತಿರುತ್ತವೆ ಎಂದರು.
ಯುವ ನಿರ್ದೇಶಕರು ಹಾಗೂ ನಿರ್ಮಾಪಕರು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಲು ಒಲವು ತೋರಿದರೆ ಚಿತ್ರರಂಗ ಇನ್ನಷ್ಟು ಬೆಳೆಯಲು ಸಾಧ್ಯ ಆಗುತ್ತದೆ. ಹಣ ಮಾಡುವುದಕ್ಕೆ ಚಿತ್ರವನ್ನು ನಿರ್ಮಿಸುವುದಾದರೆ ಅವುಗಳಿಗೆ ಉಳಿಗಾಲ ಇರುವುದಿಲ್ಲ ಎಂದು ಹೇಳಿದರು.
ಹಾಗೆಯೆ ಉತ್ತಮ ಚಿತ್ರಗಳಿಗೆ ಅತ್ಯುತ್ತಮ ಹಾಡುಗಳನ್ನು ಬರೆಯುವ ಪ್ರತಿಭಾವಂತ ಸಾಹಿತಿಗಳು ಈಗಲೂ ಇದ್ದಾರೆ. ಆದರೆ ಚಿತ್ರದ ಸನ್ನಿವೇಶಕ್ಕೆ ಪೂರಕ ಆಗುವಂತಹ ಹಾಡುಗಳನ್ನು ರಚಿಸುವ ಅವಕಾಶಗಳು ಅವರಿಗೆ ಸಿಗುತ್ತಿಲ್ಲ ಎಂದರು.
ಜಯಂತ್ ಕಾಯ್ಕಿಣಿ, ಕವಿರಾಜ್, ನಾಗೇಂದ್ರ ಪ್ರಸಾದ್ ಸೇರಿದಂತೆ ಅನೇಕ ಸಾಹಿತಿಗಳಿದ್ದಾರೆ. ಪ್ರಸ್ತುತ ಸಂಗೀತ ನಿರ್ದೇಶಕರು ನೀಡುವ ರೆಡಿಮೇಡ್ ಟ್ಯೂನ್‌ಗಳಿಗೆ ಸಾಹಿತ್ಯ ಬರೆಯುವಂತಹ ಸನ್ನಿವೇಶ ಸೃಷ್ಟಿ ಆಗಿದೆ. ಅಂತಹ ಸಾಮರ್ಥ್ಯ ಕೂಡ ಜಯಂತ್ ಕಾಯ್ಕಿಣಿ ಅವರಲ್ಲಿದೆ. ಆದರೆ ಕಥೆಗೆ ಹೊಂದಿಕೊಂಡಂತೆ ಮೂಡಿ ಬರುವ ಸಾಹಿತ್ಯ ಹೆಚ್ಚು ಸತ್ವಯುತ ಆಗಿರುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸುಮಾರು 23 ವರ್ಷಗಳ ನಂತರ ನಾನು ಮತ್ತೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದೇನೆ.ಅದಕ್ಕೆ ಕಾರಣ ಈ ಸಿನಿಮಾದ ನಟ ಸತೀಶ್. “ಇಂದ್ರ ಧನುಷ್’ ಸಿನಿಮಾದ ನಂತರ ನಾನೂ ಸೀರಿಯಲ್, ಸಂಗೀತ ನಿರ್ದೇಶನ ಅಂತ ಬ್ಯುಸಿಯಾಗುತ್ತಾ ಹೋದೆ. ಹಾಗಾಗಿ ಅಂದುಕೊಂಡಂತೆ ಸಿನಿಮಾ ನಿರ್ದೇ ಶನ ಮಾಡಲು ಸಾಧ್ಯವಾಗಲಿಲ್ಲ.ಇನ್ನು ಸಿನಿಮಾರಂಗಕ್ಕೆ ಬರೋಕೂ ಮುನ್ನ ನಾನು ಕೆಲ ದಿನಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಿದ್ದೆ. ಆಗಿಂದಲೇ ನಾನು ರಾಜಕೀಯದ ಬಗ್ಗೆ ತಿಳಿದುಕೊಂಡಿದ್ದೆ. ಇದೇ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದುಕೊಡಿದ್ದೆ. ಈಗ ಅದಕ್ಕೆ ಅವಕಾಶ ಸಿಕ್ಕಿದ್ದು, ರಾಜಕೀಯ ವಿಡಂಭನೆಯ ಕಥೆಯನ್ನು “ದರ್ಬಾರ್’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದು ಕಥಾಹಂದರದ ವಿವರಣೆ ನೀಡಿದರು.
“ದರ್ಬಾರ್’ ಸಿನಿಮಾ ಶುರುವಾದ ನಂತರ ಕೋವಿಡ್ ಹೆಚ್ಚಾಯಿತು. ಆ ಭಯದಲ್ಲಿಯೇ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದೆವು. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ ಸಿನಿಮಾದ ಬಹುತೇಕ ಶೂಟಿಂಗ್ ನಡೆಸಲಾಗಿದೆ. ಈ ಹಿಂದೆ “ದಿಲ್ದಾರ್’ ಸಮಯದಿಂದಲೂ ಸ್ನೇಹಿತರಾಗಿದ್ದ ಸತೀಶ್ ಈ ಕಥೆ ಹೇಳಿದರು. ಅದರಲ್ಲೂ ಪಾಲಿಟಿಟ್ಸ್ ಇತ್ತು. ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಸಬ್ಜೆಕ್ಟ್ ಈ ಸಿನಿಮಾದಲ್ಲಿದೆ’ ಎಂದ ವಿ. ಮನೋಹರ್ ಅವರು ದರ್ಬಾರ್ ಸಿನಿಮಾ ಜೂನ್ 9 ರಂದು ತೆರೆಕಾಣುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜಗುರು ನಾಗೇಂದ್ರ, ಬೆಂಗಳೂರು, ಶಿವಬಾಲಾಜಿ, ಬಸವರಾಜ ಗೌಡ, ಬಲ ಶಂಕರ, ಮಂಜುನಾಥ್ ಜೈ ಶಂಕರ್, ನಾಯಕ ಸತೀಶ್ ಹಾಜರಿದ್ದರು.