ವಿಷ್ಣುವರ್ಧನ್ ಅವರ ಪುತ್ರಿ, ನಟ ಅನಿರುಧ್ ಅವರ ಪತ್ನಿ
ಶ್ರೀಮತಿ ಕೀರ್ತಿಯವರಿಗೆ ವಸ್ತ್ರವಿನ್ಯಾಸದ ಕ್ಷೇತ್ರದಲ್ಲಿ ತಮ್ಮ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ‘ಆರ್ಯಭಟ್ಟ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ
ಕೀರ್ತಿ ಅವರು ಕನ್ನಡ ಚಿತ್ರರಂಗದ ಮೇರು ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪುತ್ರಿಯಾಗಿದ್ದು ನಟ ಅನಿರುಧ್ ಅವರ ಪತ್ನಿಯಾಗಿದ್ದಾರೆ. ವಸ್ತ್ರ ವಿನ್ಯಾಸದಲ್ಲಿ ಸಾಕಷ್ಟು ನಿಪುಣತೆ ಹೊಂದಿರುವ ಕೀರ್ತಿ ಅವರಿಗೆ ಈ ಪ್ರಶಸ್ತಿ ನಿಜಕ್ಕೂ ಮತ್ತಷ್ಟು ಸ್ಫೂರ್ತಿ ತಂದಿದೆ
ವಿಷ್ಣುವರ್ಧನ್ ಅವರಿಗೂ ಕೀರ್ತಿ ಅವರೇ ವಸ್ತ್ರ ವಿನ್ಯಾಸ ಮಾಡುತ್ತಿದ್ದರು. ಕಿರ್ತಿಯವರ ವಸ್ತ್ರ ವಿನ್ಯಾಸ ವೆಂದರೆ ವಿಷ್ಣುವರ್ಧನ್ ಅವರಿಗೆ ಅಚ್ಚುಮೆಚ್ಚು ಎಂದು ಭಾರತಿ ವಿಷ್ಣುವರ್ಧನ್ ಕೆಲ ಸಂದರ್ಶನದಲ್ಲಿ ಹೇಳಿದ್ದನ್ನು ಸ್ಮರಿಸಬಹುದಾಗಿದೆ.