ಬೆಂಗಳೂರು : ಬಿಜೆಪಿ ಪಕ್ಷ ರಾಜ್ಯದಲ್ಲಿ ಹೀನಾಯವಾಗಿ ಸೋತಿರುವ ಹಿನ್ನಲೆಯಲ್ಲಿ ಸೋಲಿನ ನೈತಿಕತೆಯನ್ನು ನಾನೇ ಹೋರುತ್ತೇನೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಇದರ ಬೆನ್ನಲ್ಲೇ ನಾನು ಕೂಡ ಸೋಲಿನ ಹೊರೆ ಹೊರುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ
ಕಾಂಗ್ರೆಸ್ ಸುನಾಮಿಯಲ್ಲಿ ಬಿಜೆಪಿ ಕೊಚ್ಚಿ ಹೋಗಿದ್ದು, ರಾಜ್ಯಾಧ್ಯಕ್ಷ ಕಟೀಲ್, ಸಿಟಿ ರವಿ ,ಸಂತೋಷ್ ಈ ಸೋಲಿಗೆ ಕಾರಣ ಎಂದು ಬಿಜೆಪಿ ಕೆಲ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇರಲಿಲ್ಲ ಕೆಲ ನಾಯಕರನ್ನು ಮುಗಿಸಲು ಕೆಲವರು ಸಂಚು ನಡೆಸಿದ್ದರು ಎಂದು ಕಾರ್ಯಕರ್ತರು ಬೇಸರ ವ್ಯಕ್ತ ಪಡಿಸಿದ್ದಾರೆ
ಏನಿದು ಕಾರ್ಯಕರ್ತರ ವಾದ
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಸರ್ವೋಚ್ಚ ನಾಯಕ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿ ಮೊದಲ ತಪ್ಪು ಮಾಡಿತ್ತು, ಅಲ್ಲದೆ ಒಂದೇ ಒಂದು ಅಭ್ಯರ್ಥಿಯನ್ನು ಗೆಲ್ಲಿಸಲು ಶಕ್ತಿ ಇಲ್ಲದ ಕಟೀಲ್ ಅವರನ್ನು ರಾಜ್ಯಾಧ್ಯಕ್ಷ ಮಾಡಿದ್ದಾರೆ ಇದರಿಂದ ಬಿಜೆಪಿ ಏನು ಲ್ಲಾಭವಿಲ್ಲ. ಇದರ ಜೊತೆಗೆ ಸಿಟಿ ರವಿ,ಸಂತೋಷ್ ಕೂಡ ಪಕ್ಷದ ಸೋಲಿಗೆ ಕಾರಣ ಎಂಬುದು ಕಾರ್ಯಕರ್ತರ ವಾದವಾಗಿದೆ.
45 ವರ್ಷಗಳಿಂದ ಪಕ್ಷ ಕಟ್ಟಿದ ಯಡಿಯೂರಪ್ಪ ರನ್ನು ಕೆಳಗಿಳಿದ್ರು, ಸಿಟಿ ರವಿ ಅವರ ಭಾಷಣಗಳು ಕೇವಲ ಕೇಳಲು ಚಂದ ಅಷ್ಟೇ ಹೊರತು ಅವು ಮತ ವಾಗಿ ಪರಿವರ್ತನೆ ಮಾಡಲು ಆಗಲ್ಲ , ಈಗಲಾದರೂ ರಾಜ್ಯ ಬಿಜೆಪಿ ಸೂಕ್ತ ಹಾಗೂ ಸಮರ್ಥ ವ್ಯಕ್ತಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ಕಟ್ಟಿ ಪಕ್ಷದಲ್ಲಿ ಕೆಲ ಬದಲಾವಣೆ ಮಾಡಬೇಕು ಎಂಬುದು ಬಿಜೆಪಿ ಕಾರ್ಯಕರ್ತರ ವಾದವಾಗಿದೆ.
ಉತ್ತರ ಪ್ರದೇಶ ಗುಜರಾತ್ ರಾಜ್ಯಗಳ ಸ್ಥಿತಿಗತಿಗಳೇ ಬೇರೆ ಕರ್ನಾಟಕದ ಸ್ಥಿತಿಗತಿಗಲೆ ಬೇರೆ ಇಲ್ಲಿ ಸ್ಥಳೀಯ ನಾಯಕರಿಗೆ ಹೆಚ್ಚಿನ ಹೊತ್ತನ್ನು ನೀಡಬೇಕು. ಇಲ್ಲಿನ ನಿಜ ಸ್ಥಿತಿಗಳ ಬಗ್ಗೆ ಸಂತೋಷ್ ಕೇಂದ್ರಕ್ಕೆ ತಪ್ಪು ಮಾಹಿತಿ ನೀಡಿ ತಮಗೆ ಬೇಕಾದ ರೀತಿಯಲ್ಲಿ ಪಕ್ಷವನ್ನು ಕಟ್ಟಲು ಹೋದರೆ ಮುಂದೆಯೂ ಬಿಜೆಪಿ ಇದೇ ಸ್ಥಿತಿ ಬರುವುದು ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.