ಸೋಮವಾರಪೇಟೆ : ಮಕ್ಕಳ ಮನಸ್ಸು ವಿಕಾಸನಗೊಳ್ಳಲು ಪಠ್ಯದೊಂದಿಗೆ ಪಟ್ಯೆತರ ಚಟುವಟಿಕೆಗೂ ಪೋಷಕರು ಆದ್ಯತೆ ಕೊಡಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕಲಾಪ್ರಾಚಾರ್ಯರು,ಹಾಗೂ ಸಿನಿಮಾನಟಿ ಡಾ.ಪವಿತ್ರ ಹೇಳಿದರು.
ಇಲ್ಲಿನ ಯಶೋದೆ ರಂಗ ಟ್ರಸ್ಟ್ ಆಶ್ರಯದಲ್ಲಿ ಸಾಂದೀಪನಿ ಪ್ರೌಡ ಶಾಲೆ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ಕಳೆದ ಇಪ್ಪತ್ತು ದಿನಗಳು ನಡೆದ ಮಕ್ಕಳ ಕಲಿಕಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಂದು ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಂಕಗಳಿಸಬೇಕು,ರ್ಯಾಂಕ್ ಬರಬೇಕು ಎಂದು ಆಶಿಸುತ್ತಾರೆ ಆದರೆ ಅವರ ಮಾನಸಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಗಮನವೇ ಹರಿಸುವುದಿಲ್ಲ ಎಂದು ವಿಷಾದಿಸಿದರು.
ನಿಮ್ಮ ಮಕ್ಕಳ ಅಂಕಗಳು ಅಂಕಪಟ್ಟಿಯಲ್ಲಿ ಕಂಡರೆ ಅವರ ಪಟ್ಯೆತರ ಚಟುವಟಿಕೆ ಅವರ ಮುಂದಿನ ಜೀವನದಲ್ಲಿ ಕಾಣಬಹುದು ಎಂದರು. ಅವರ ಚಟುವಟಿಕೆಗಳು ಕೇವಲ ಬೇಸಿಗೆ ಶಿಬಿರಕ್ಕೆ ಮೀಸಲಾಗದೆ ಅವರಿಗೆ ನಿತ್ಯವೂ ಪ್ರೋತ್ಸಾಹಿಸಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾವು ದ್ರಾವಿಡ ಕನ್ನಡಿಗರು ಸಂಸ್ತೆ ಮುಖ್ಯಸ್ಥ ಅಭಿಗೌಡ ಮಾತನಾಡಿ ಇಂದಿನ ಒತ್ತಡದ ಶಿಕ್ಷಣದ ನಡುವೆ ಮಕ್ಕಳ ಮನಸ್ಸು ಉಲ್ಲಾಸಿತವಾಗಲು ಇಂಥ ಬೇಸಿಗೆ ಶಿಬಿರಗಳು ಹಾಗೂ ತರಬೇತಿಗಳು ಸಹಕಾರಿಯಾಗುತ್ತದೆ ಎಂದರು.
ಯಾವುದೇ ಮಕ್ಕಳ ಬಗ್ಗೆ ನಕಾರಾತ್ಮಕ ಚಿಂತನೆಗಳು ಬೇಡಾ ಅವರಿಗೆ ಸರಿಯಾದ ಸಮಯದಲ್ಲಿ ಸೂಕ್ತ ತರಬೇತಿ ಸಿಕ್ಕಿದರೆ ಒಳ್ಳೆಯ ವ್ಯಕ್ತಿಗಳಾಗಿ ರೂಪು ಗೊಳ್ಳುತಾರೆ ಎಂದರು.ಕಾರ್ಯಕ್ರಮದಲ್ಲಿ ಝೀ ಕನ್ನಡ ವಾಹಿನಿಯ ಸರಿಗಮಪ ಪ್ರಶಸ್ತಿ ವಿಜೇತೆ ಕು.ಪ್ರಗತಿ ಬಡಿಗೇರ್ ರವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಮಾತನಾಡಿದ ಪ್ರಗತಿ ಉತ್ತಮವಾದ ತರಬೇತಿ ಹಾಗೂ ಮಾರ್ಗದರ್ಶನ ದೊರೆತರೆ ಎಂತಹವರು ಪ್ರತಿಭಾವಂತರಾಗುತಾರೆ ಅದಕ್ಕೆ ನಾನೇ ಉದಾಹರಣೆ.ಕರ್ನಾಟಕ ಜನತೆಯ ಪ್ರೀತಿ ವಿಶ್ವಾದದಿಂದ ನಾನು ಜಯಗಳಿಸಲು ಸಾಧ್ಯವಾಯಿತು ಎಂದು ಕೃತಜ್ಞತೆಯಿಂದ ಸ್ಮರಿಸಿಕೊಂಡರು.
ಕುಶಾಲನಗರದ ಶ್ರೀಮತಿ.ಫ್ಯಾನ್ಸಿ ಮುತ್ತಣ್ಣ, ಯಶೋದೆ ರಂಗ ಟ್ರಸ್ಟ್ ನ ಅಧ್ಯಕ್ಷ ಮುತ್ತಣ್ಣ,ಗಣೇಶ್ ಎಂ ಭೀಮನಕೋಣೆ ಶಿಬಿರ ನಿರ್ದೇಶಕರು
ನಿಶಾಂತ್ ಮುತ್ತಣ್ಣ ಸಂಚಾಲಕರು ,
ಸಂಪನ್ಮೂಲ ವ್ಯಕ್ತಿಗಳು ಹಾಗೂ ರಂಗ ಕಲಾವಿದರಾದ
ಅರ್ಚನಾ ಸುರೇಶ್,ಸುಮಂತ್ ,ಯೋಗಿಶ್,
ಇನ್ಸಾಫ್,ಶಿವಕುಮಾರ್ ತೀರ್ಥಳ್ಳಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಶಿಬಿರದಲ್ಲಿ ತರಭೇತಿ ಪಡೆದ ವಿದ್ಯಾರ್ಥಿಗಲಿಂದ ನಾಟಕ,ಯಕ್ಷಗಾನ,ನೃತ್ಯ ಹಾಗೂ ಮುಂತಾದ ಪ್ರದರ್ಶನ ನಡೆಯಿತು.