ಮೈಸೂರು : ಮೇ.7ರ ಸಂಜೆ 4 ಗಂಟೆಗೆ ಮತ್ತೇ ಮೈಸೂರಿಗೆ ಮೋದಿ ಆಗಮಿಸಿ ನಂಜನಗೂಡಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮುಖಂಡ ಮೈವಿ ರವಿಶಂಕರ್ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಮೈಸೂರು ಚಾಮರಾಜನಗರ ಎರಡು ಜಿಲ್ಲೆಯ ಅಭ್ಯರ್ಥಿಗಳ ಪರವಾಗಿ ಮೋದಿ ಮತಬೇಟೆ ನಡೆಸಲಿದ್ದಾರೆ. ಅಲ್ಲದೆ ಎರಡು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ಜನರು ಬರುತ್ತಿದ್ದಾರೆ.ಒಂದು ಲಕ್ಷ ಜನ ಈ ಬೃಹತ್ ಪ್ರಚಾರ ಸಭೆಗೆ ಆಗಮಿಸುವ ನಿರೀಕ್ಷೆ ಇದೆ ಎಂದರು.
ನಂಜನಗೂಡಿನ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಬೃಹತ್ ರ್ಯಾಲಿ ಇದಾಗಿದೆ. 2 ಸಾವಿರ ಬೈಕ್ಗಳ ಮೂಲಕ ಯುವಕರು ಬರುತ್ತಿದ್ದಾರೆ.ಎಸ್ಪಿಜಿ ಸೂಚನೆಯಂತೆ ಭದ್ರತೆಗೆ ಸಿದ್ದತೆ ಆಗಿದೆ.ನೇರವಾಗಿ ಪ್ರಚಾರ ಸಭೆಯ ಒಂದು ಕಿ.ಮೀ ವ್ಯಾಪ್ತಿಯಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಆಗಲಿದೆ ಎಂದು ಹೇಳಿದರು