ನಂಜನಗೂಡು : ಇದು ನನ್ನ ಕೊನೆ ಚುನಾವಣೆ, ನಾನು ಶಾಸಕ ಹರ್ಷವರ್ಧನ್ ಪರ ಮತಪ್ರಚಾರಕ್ಕೆ ಬಂದಿರುವೇ ಎಂದು ನಗರದ ಶಂಕರಪುರದಲ್ಲಿ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.
ಕಳೆದು ಐದು ವರ್ಷಗಳ ಹಿಂದೆ ನಿಮ್ಮ ಮತ ಕೇಳಲು ಬಂದಾಗ ಶಾಸಕ ಹರ್ಷವರ್ಧನ್ ಅವರು ನಿಮಗೆ ಕೊಟ್ಟ ಮಾತಿನಂತೆ ಕಾರ್ಯನಿರ್ವಹಿಸಿದ್ದಾರೆ. ಶಂಕರಪುರ, ಅನಂದಪುರ, ಶ್ರೀರಾಮಪುರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮಾಡುವ ಕಾರ್ಯಗಳು ಸಹ ಇನ್ನೂ ಇವೆ ಅವುಗಳನ್ಮು ಪೂರೈಸಲು ಅವರನ್ನು ಮತ್ತೆ ಶಾಸಕರಾಗಿ ಆಯ್ಕೆ ಮಾಡುವಂತೆ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಮತ ಕೋರಿದರು.
ನಗರದ ಶಂಕರಪುರ, ಶ್ರೀರಾಂಪುರ, ಅನಂದನಗರದಲ್ಲಿ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಶಾಸಕ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಪರ ಮತ ಪ್ರಚಾರ ನಡೆಸಿದರು.
ಇದು ನನ್ನ ಕೊನೆ ಚುನಾವಣೆ ಎಂದು ಹೇಳಿದ ಸಂಸದ ಶ್ರೀನಿವಾಸ್ ಪ್ರಸಾದ್ ಅವರು, ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಸುಮಾರು ೮೦೦ ಕೋಟಿ ರೂಪಾಯಿ ಅನುದಾನವನ್ನು ಶಾಸಕರು ತಂದಿದ್ದಾರೆ. ನಗರದಲ್ಲಿ ಸಿಸಿ ರಸ್ತೆ, ಸಮುದಾಯ ಭವನ, ಚರಂಡಿ ನಿರ್ಮಾಣ, ಶಾಲಾ ಕೊಠಡಿ, ನುಗು ಏತಾ ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಹರ್ಷವರ್ಧನ್ ಅವರನ್ನು ಮತ್ತೊಮ್ಮೆ ಶಾಸಕನಾಗಿ ಆಯ್ಕೆ ಮಾಡುವಂತೆ ಕ್ಷೇತ್ರದ ಮತದಾರಲ್ಲಿ ಮನವಿ ಮಾಡಿದರು.
ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಹರ್ಷವರ್ಧನ್ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಮತ್ತು ಅನುದಾನ ಬಳಕೆಯನ್ನು ಕ್ಷೇತ್ರಕ್ಕೆ ಬಂದಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಮೆಚ್ಚಿಕೊಂಡಿದ್ದಾರೆ ಎಂದು ಸಂಸದರು ಹೇಳಿದರು.
ಶಾಸಕ ಹರ್ಷವರ್ಧನ್ ಮಾತನಾಡಿ, ಶಂಕರಪುರದಲ್ಲಿ ಸುಮಾರು ೫೦ ಲಕ್ಷ ವೆಚ್ಚದ ಅಂಬೇಡ್ಕರ್ ಸಮುದಾಯ ಭವನ, ೩೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಗರಡಿ ಮನೆ, ಶಾಲಾ ಕೊಠಡಿ ಹದಿನೈದು ಲಕ್ಷದ ವೆಚ್ಚದಲ್ಲಿ ಸ್ಮಶಾನದ ರಸ್ತೆ, ಉದ್ಯಾನವನ ಸೇರಿದಂತೆ ಸುಮಾರು ಹಲವು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಅಭಿವೃದ್ಧಿ ಕಾರ್ಯ ನೋಡಿ ನನ್ನ ಗೆಲುವಿಗೆ ನಿಮ್ಮ ಮತ ನೀಡಿ ಮತದಾರರಲ್ಲಿ ಮನವಿ ಮಾಡಿದರು.
ಕ್ಷೇತ್ರದ ಮುಖಂಡರು ಮಾತನಾಡಿ, ಮಾತು ಕೊಟ್ಟ ರೀತಿ ಕ್ಷೇತದ ಅಭಿವೃದ್ಧಿ ಕಾರ್ಯ ಮಾಡಿರುವ ಹರ್ಷವರ್ಧನ್ ಅವರ ಗೆಲುವಿಗೆ ನಿಮ್ಮ ಮತ ನೀಡಿ ಅವರ ಗೆಲುವಿನ ಅಂತರ ಮತ್ತಷ್ಟು ಹೆಚ್ಚಿಸುವ, ವಿರೋಧಿಗಳ ಮಾತಿಗೆ ಕಿವಿ ಕೊಡದೆ ನಾವು ಅಭಿವೃದ್ಧಿ ಮಂತ್ರ ಜಪಿಸುವ ಹರ್ಷವರ್ಧನ್ ಅವರನ್ನು ಗೆಲ್ಲಿಸುವ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕುಂಬರಹಳ್ಳಿ ಸುಬ್ಬಣ್ಣ,ಶಿರುಮಳ್ಳಿ ಮಹದೇವ ಸ್ವಾಮಿ, ಬಾಲಚಂದ್ರ, ನಗರ ಬಿಜೆಪಿ ಕಾರ್ಯದರ್ಶಿ ಧನರಾಜ್, ಬಿ. ಬಸವರಾಜು, ದೇವಪುತ್ರ, ಮಾಜಿ ನಗರಸಭಾ ಸದಸ್ಯರಾದ ವಿಜಯಾಂಭಿಕ, ಪುಟ್ಟರಾಜು, ನಿವೃತ್ತ ಶಿಕ್ಷಕರಾದ ಸರೋಜ, ಲಕ್ಷಮ್ಮಕ್ಕ, ರಾಘವೇಂದ್ರ, ಶಂಕರಪುರ, ಅನಂದ ಪುರ, ಶ್ರೀರಾಂಪುರ ಗ್ರಾಮಸ್ಥರು ಇದ್ದರು.