– ಗಲಾಟೆ ಮಾಡಲು ಬಕೆಟ್ ಅಲ್ಲಿ ಕಲ್ಲು ಇಟ್ಟುಕೊಂಡು ಬಂದಿದ್ದರು
– ಸಿದ್ದರಾಮಯ್ಯ ಸಣ್ಣತನ ತೋರುತ್ತಿದ್ದಾರೆ
– ಸಿದ್ದರಾಮಯ್ಯ ಸಹೋದರರ ಮನೆ ಮುಂದೆಯೇ ಘಟನೆ ನಡೆದಿದೆ
ಮೈಸೂರು : ವರುಣ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೆ ಸಿದ್ಧರಾಮಯ್ಯ ಹಾಗು ಅವರ ಬೆಂಬಲಿಗರು ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಸಿದ್ಧರಾಮಯ್ಯ ಸೋಲಿನ ಹತಾಶೆ, ಭೀತಿಯಿಂದಾಗಿ ಈ ರೀತಿ ಮಾಡಿಸುತ್ತಿದ್ದಾರೆ.ಸಿದ್ದರಾಮಯ್ಯ ಪಾಳಯದಲ್ಲಿ ಹತಾಶೆ ಮತ್ತು ಸೋಲಿನ ಭಯ ಶುರುವಾಗಿದೆ.
ಹೀಗಾಗಿ ಬಿಜೆಪಿ ಅವರು ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.
ಸಿದ್ದರಾಮಯ್ಯ ಈ ರೀತಿ ಸಣ್ಣತನ ಯಾಕೆ ಮಾಡುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ನಿನ್ನೆ ನಮ್ಮ ಚುನಾವಣಾ ಪ್ರಚಾರದ ಮೆರವಣಿಗೆ ಮೇಲೆ
ಕಲ್ಲು ತೂರಿದ್ದಾರೆ.ಬಕೆಟ್ ಗಳಲ್ಲಿ ಕಲ್ಲು ಇಟ್ಟು ಕೊಂಡಿದ್ದರು.
ಗಲಾಟೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡು ಬಂದಿದ್ದರು.ಸಿದ್ಧರಾಮಯ್ಯನವರ ಸಹೋದರರ ಮನೆಯ ಬಳಿಯೇ ಈ ಘಟನೆ ನಡೆದಿದೆ.ಸೋಲಿನ ಭಯದಿಂದ ಈ ರೀತಿ ಸಿದ್ದರಾಮಯ್ಯರ ತಂಡ ಮಾಡುತ್ತಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರು ತಮ್ಮ ಸ್ವಜಾತಿಯವರಿಗೆ ಚಿತಾವಣೆ ಕೊಟ್ಟು ಈ ರೀತಿಯೆಲ್ಲಾ ತೊಂದರೆ ಕೊಡಿಸುತ್ತಿದ್ದಾರೆ.ಸಿದ್ದರಾಮಯ್ಯ ಒಬ್ಬ ಜಾತಿವಾದಿ, ಸಿದ್ದರಾಮಯ್ಯ ಅವರಿಗೆ ಸ್ವಜಾತಿ ಮಾತ್ರ ಮುಖ್ಯ ಅನ್ನೋದು ವರುಣ ಜನರಿಗೆ ಗೊತ್ತಿದೆ.ಸಿದ್ದರಾಮಯ್ಯ ಜಾತಿವಾದಿಯಾಗಿರುವ ಕಾರಣ ವರುಣ ಕ್ಷೇತ್ರದಲ್ಲಿ ಎಲ್ಲಾ ವರ್ಗದ ಜನ ಸೋಮಣ್ಣನವರ ಪರವಾಗಿ ನಿಂತಿದ್ದಾರೆ.
ಇದರಿಂದ ಸಿದ್ಧರಾಮಯ್ಯ ತೀವ್ರ ಹತಾಶರಾಗಿ ಸೋಲಿನ ಭೀತಿಯಿಂದ ಈ ರೀತಿ ಮಾಡಿಸುತ್ತಿದ್ದಾರೆ ಎಂದರು.

ವರುಣ ಕ್ಷೇತ್ರದಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.