ಮೈಸೂರು: ಬಿಜೆಪಿ ಕಾರ್ಯಕರ್ತ ಗಾಯಾಳು ನಾಗೇಶ್ ಅವರನ್ನು ಬೇಟಿ ಮಾಡಿ ಸಚಿವ ವಿ.ಸೋಮಣ್ಣ ಆರೋಗ್ಯ ವಿಚಾರಿಸಿದ್ದಾರೆ.
ನೆನ್ನೆ ಸಿದ್ದರಾಮನ ಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತ ಕೀಳನಪುರ ಮಂಜಣ್ಣನವರ ಮಗ ನಾಗೇಶ್ ಮೇಲೆ ಕೆಲ ಸಿದ್ದರಾಮಯ್ಯ ಬೆಂಬಲಿಗರು ಪ್ರಚಾರ ನಡೆಸದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಹಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ನಾಗೇಶ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು,
ಇಂದು ಬೆಳಿಗ್ಗೆ ಸಂಸದ ಪ್ರತಾಪ್ ಸಿಂಹ ಜೊತೆಗೂಡಿ ಸೋಮಣ್ಣ ನಾಗೇಶ್ ಬೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.ಅಲ್ಲದೆ ಹೆದರಬೇಡ ಜೊತೆಗೆ ನಾವಿದ್ದೇವೆ ಎಂದು ದೈರ್ಯ ಹೇಳಿದ್ದಾರೆ ಎನ್ನಲಾಗಿದೆ.