ಮೈಸೂರು: ನಾನೇ ನಾನೇ ಎನ್ನುತ್ತಿದ್ದ ಇಬ್ಬರಲ್ಲಿ, ಒಬ್ಬರು 36 ಸಾವಿರ ಮತಗಳ ಅಂತರದಿಂದ ಇನ್ನೊಬ್ಬ ಮಹಾ ಪುರುಷ 29 ಸಾವಿರ ಮತಗಳ ಅಂತರದಿಂದ ಸೋತರೂ ಎಂದು ಸಿದ್ದು ಹಾಗೂ ಮಹದೇವಪ್ಪ ಹೆಸರೇಳದೆ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಪಾರ್ಟಿ ಒಂದು ಮದ್ದೂರು ಸೆಟಲ್ ಟ್ರೈನ್ ಆಗಿದೆ, ಮದ್ದೂರು ಸೆಟಲ್ ಟ್ರೈನ್ ಎಂದರೇ ಗೊತ್ತಾ? ಅದು ಮದ್ದೂರು ಬಿಟ್ಟು ಯಾವಾಗ ಬೆಂಗಳೂರು ಸೇರುತ್ತೆ ಎನ್ನುವುದೇ ಗೊತ್ತಾಗಲ್ಲ ಅದೇ ಪರಿಸ್ಥಿಯಲ್ಲಿ ಇಂದು ಕಾಂಗ್ರೆಸ್ ಪಕ್ಷವಿದೆ ಆದರೂ ಅಧಿಕಾರದ ಕನಸು ಕಾಣುತ್ತಿದ್ದಾರೆ ಎಂದು ತಿಳಿಸಿದರು.
ಡಿಕೆಶಿ ರಕ್ತದಲ್ಲಿ ಬರೆದು ಕೊಡುತ್ತೇನೆ ಎನ್ನುತ್ತಾರೆ, ಒಂದು ರಾಷ್ಟ್ರೀಯ ಪಕ್ಷದ ರಾಜ್ಯದ ಅದ್ಯಕ್ಷರಾಗಿ ಮಾತನಾಡುವ ರೀತಿ ಇದೇನಾ ಎಂದು ಪ್ರಶ್ನಿಸಿದರು. ಅಲ್ಲದೆ ಡಿಕೆಶಿ ಮೇಲೆ ಇಡಿ ಕತ್ತಿ ತೂಗಡುತ್ತಿದೆ ಯಾವಾಗ ಎಲ್ಲಿ ಏನಾಗುತ್ತೋ ಗೊತ್ತಿಲ್ಲ ಆರೂವರೆ ಸಾವಿರ ಕೋಟಿ ಒಡೆಯ ಮುಖ್ಯಮಂತ್ರಿ ಆಗಿ ಏನು ಆಡಳಿತ ಕೊಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಯೋಗಿ ಅಧಿತ್ಯಾನಾಥ್ ಹಾಡಿ ಹೊಗಳಿದ ಪ್ರಸಾದ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಡ್ಯದಲ್ಲಿ ನೆನ್ನೆ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಬಗ್ಗೆ ಹೇಳಿದ್ರು, ಬಹಳ ಅದ್ಭುತವಾಗಿ ಮಾತನಾಡಿದರು. ಉತ್ತರ ಪ್ರದೇಶದಲ್ಲಿ ಅವರ ಕಾರ್ಯ ವೈಖರಿ ಚೆನ್ನಾಗಿದೆ, ಕಾನೂನು ಸುವ್ಯಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿಭಯಿಸುತ್ತಿದ್ದಾರೆ ಎಂದರು. ಅಲ್ಲದೆ ಬಸವರಾಜ್ ಬೊಮ್ಮಾಯಿ ಉತ್ತಮವಾಗಿ ಆಡಳಿತ ಕೊಟ್ಟಿದ್ದಾರೆ ಯಾವುದೇ ಸಮಸ್ಯೆಗಳು ಬಂದರು ಕೂಲ್ ಆಗಿ ಪರಿಹಾರ ನೀಡುತ್ತಾ ಅತ್ಯುತ್ತಮ ಬಜೆಟ್ ಮಂಡನೆ ಮಾಡಿದ್ದಾರೆ ಇದಕ್ಕಿಂತ ಇನ್ನೇನು ಬೇಕು ಎಂದು ಪ್ರಶ್ನಿಸಿದರು.