ಮೈಸೂರು : ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆ ಸ್ವೀಪ್ ಯಡಿಯಲ್ಲಿ ಮತದಾನ ಮಾಡುವ ಕುರಿತು ಅರಿವು ಮೂಡಿಸಲು ಅಂತಾರಾಷ್ಟ್ರೀಯ ಯೋಗಪಟುವಾದ ಕುಮಾರಿ ಖುಷಿ ಅವರು ಜಿಲ್ಲಾ ಐಕಾನ್ ಆಗಿ ಆಯ್ಕೆಯಾಗಿದ್ದು, ಇವರನ್ನು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಕೆ.ಎಂ ಗಾಯಿತ್ರಿ ಅವರು ಅಭಿನಂದಿಸಿದರು.
ಈ ವೇಳೆ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ ಆಯುಕ್ತರಾದ ದೇವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ ಅವರು ಸೇರಿದಂತೆ ಇತರರು ಇದ್ದರು.