ಮೈಸೂರು: ಮೈಸೂರು ಮೈಲಾರಿ ಹೋಟೆಲ್ನಲ್ಲಿ ಪ್ರಿಯಾಂಕ ಗಾಂಧಿ ದೋಸೆ ಸವಿದಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಪ್ರಿಯಾಂಕ ಗಾಂಧಿ ಇಂದು ಮೈಸೂರಿನಲ್ಲಿ ಪ್ರಸಿದ್ಧ ಮೈಲಾರಿ ಹೋಟೆಲ್ನಲ್ಲಿ ದೋಸೆ ಸವಿದು ಸಂತಸ ವ್ಯಕ್ತಪಡಿಸಿದರು.
ಉಪಹಾರಕ್ಕೆ ಆಗಮಿಸಿದ ಅವರು, ಸ್ವತಃ ಸೌದೆ ಒಲೆಯಲ್ಲಿ ದೋಸೆ ಹಾಕುವ ಮೂಲಕ ಅಲ್ಲಿದ್ದವರಿಗೆ ಆಶ್ಚರ್ಯ ಆಗುವಂತೆ ಮಾಡಿದರು. ನಂತರ ಅಲ್ಲಿದ್ದ ಹೋಟೆಲ್ ಸಿಬ್ಬಂದಿ ಹಾಗೂ ಹೋಟೆಲ್ ಮಾಲೀಕರ ಕುಟುಂಬವನ್ನು ಮಾತನಾಡಿಸಿ ಹೋಟೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಿಯಾಂಕ್ ಗಾಂಧಿಗೆ ಕರ್ನಾಟಕ ಉಸ್ತುವಾರಿ ಸುರ್ಜೇವಲಾ,ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಪಿಸಿಸಿ ಸ್ಪೋಕ್ ವುಮೆನ್ ಐಶ್ವರ್ಯ ಸಾಥ್ ನೀಡಿದರು