ಚಾಮರಾಜನಗರ : ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಪೈಕಿ ಪ್ರಮುಖರಾಗಿದ್ದ ಮಾಜಿ ಶಾಸಕ ದಿ. ಸಿ. ಗುರುಸ್ವಾಮಿ ಅವರು ಪುತ್ರಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾಗಶ್ರೀ ಪ್ರತಾಪ್ ಅವರ ಬಗ್ಗೆ ವೇದಿಕೆ ಹಾಗೂ ಮೆರವಣಿಗೆಯಲ್ಲಿ ಅಭ್ಯರ್ಥಿ ಹಾಗೂ ಉಸ್ತುವಾರಿ ಸಚಿವ ವಿ. ಸೋಮಣ್ಣ ವಿಶೇಷ ಕಾಳಜಿ ವಹಿಸಿದರು.
ಇಂದು ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಸೋಮಣ್ಣ ಅವರನ್ನು ಹಿಂಬಾಲಿಸಿಕೊಂಡು ಬಂದ ನಾಗಶ್ರೀ ಅವರಿಗೆ ವೇದಿಕೆಯ ದೂರದಲ್ಲಿದ್ದ ಖಾಲಿ ಕುರ್ಚಿಯಲ್ಲಿ ಕುಳಿತಿದ್ದರು. ಇದನ್ನು ಗಮನಿಸಿದ ವಿ. ಸೋಮಣ್ಣ ತಮ್ಮ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಸೂಚನೆ ನೀಡಿ, ಅಲ್ಲಿದ್ದವರನ್ನು ಪಕ್ಕ ಕೂರುವಂತೆ ಹೇಳಿದರು.
ವೇದಿಕೆಯಲ್ಲಿಲ್ಲು ಸಹ ಪ್ರಮುಖವಾಗಿ ಪ್ರೊ ಮಲ್ಲಿಕಾರ್ಜುನಪ್ಪ ನಂತರ ನಾಗಶ್ರಿ ಅವರಿಗೆ ಭಾಷಣ ಮಾಡಲು ಅವಕಾಶ ನೀಡಿ ಯುವ ನಾಯಕತ್ವವನ್ನು ಬೆಂಬಲಿಸುವ ವಿಶ್ವಾಸವನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಿದಂತೆ ಇತ್ತು.
ಅಲ್ಲದೇ ವೇದಿಕೆಯಲ್ಲಿಯು ಸಹ ನಾಗಶ್ರೀಪ್ರತಾಪ್ ಅವರೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಂಡು ಮಾತನಾಡಿದ್ದು, ಅವರ ಅಭಿಮಾನಿಗಳಲ್ಲಿ ಒಂದು ರೀತಿಯ ಮಂದ ಹಾಸ ಮಾಡಿತ್ತು. ನಾಗಶ್ರೀ ಹೆಸರೇಳುತ್ತಿದ್ದಂತೆ ಜಯಕಾರ ಹೆಚ್ಚಾಗಿತ್ತು. ಮೆರವಣಿಗೆಯಲ್ಲಿ ಜೊತೆಯಲ್ಲಿ ಬಂದ ನಾಗಶ್ರೀ ಸೂಚಕರಾಗಿಯು ಸಹ ನಾಮಪತ್ರ ಸಲ್ಲಿಕೆಯಲ್ಲಿದ್ದರು.