ಮೈಸೂರು: ಮೈಸೂರಿನ ಪ್ರತಿಷ್ಠಿತ ಕೆ.ಆರ್ ಕ್ಷೇತ್ರಕ್ಕೆ ಕೊನೆಗೂ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು ಮಾಜಿ ಸಚಿವ ರಾಮದಾಸ್ ಗೆ ಟಿಕೆಟ್ ಕೈ ತಪ್ಪಿದೆ.
ಕಳೆದ ಕೆಲ ದಿನಗಳಿಂದ ಕೆ.ಆರ್ ಕ್ಷೇತ್ರದಲ್ಲಿ ಅನೇಕ ಗೊಂದಲಗಳು ಮನೆ ಮಾಡಿದ್ದು, ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಾಮದಾಸ್ ಗೆ ಟಿಕೆಟ್ ಮಿಸ್ ಆಗಲಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಇದೀಗ ಬಿಜೆಪಿ ಹೈ ಕಮಾಂಡ್ ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸಗೆ ಟಿಕೆಟ್ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ.
ಕೆ.ಆರ್ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ರಾಜೀವ್ ಹಾಗೂ ರಾಮದಾಸ್ ನಡುವೆ ಪೇಟ್ ನಡೆದಿತ್ತು, ಇಬ್ಬರಿಗೂ ಟಿಕೆಟ್ ನೀಡದೆ ಹೊಸ ಮುಖಕ್ಕೆ ಬಿಜೆಪಿ ಮಣೆ ಹಾಕಿದೆ. ಇನ್ನು ಕೊನೆ ಕ್ಷಣದ ವರೆಗೂ ಟಿಕೆಟ್ ನಿರೀಕ್ಷೆಯಲ್ಲಿದ್ದ ರಾಮದಾಸ್ ಮುಂದಿನ ನಡೆ ಏನು ಎಂಬುದು ಇನ್ನೂ ನಿಗೂಢವಾಗಿದೆ