ಕೆಲ ದಿನಗಳಿಂದ ಹಿರಿಯ ನಟಿ ಲೀಲಾವತಿ ಅವರ ಮಗನ ಮದುವೆ ವಿಚಾರವಾಗಿ ಸಾಕಷ್ಟು ಚರ್ಚೆ ಆಗುತ್ತಿದ್ದು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಅವರು ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಮದುವೆ ವಿಚಾರ ಪ್ರಸ್ತಾಪ ಮಾಡಿ, ವಿನೋದ್ ರಾಜ್, ಅವರ ಪತ್ನಿ ಮತ್ತು ಮಗನ ಫೋಟೋ ಇದು ಎಂದು ಹೇಳಿದ್ದರು. ಈ ವಿಷಯ ಹೊರಗೆ ಬರುತ್ತಿದ್ದಂತೆಯೇ ಲೀಲಾವತಿ ಅವರು ಮಗನ ಮದುವೆ ಆಗಿದೆ ಎನ್ನುವ ಸತ್ಯವನ್ನು ತಾವೇ ಹೇಳಿ ಈ ವಿಷಯಕ್ಕೆ ತೆರೆ ಎಳೆದರು
ಈಗ ಈ ವಿಷಯವಾಗಿ ನಟ ವಿನೋದ್ ರಾಜ್ ಖಾಸಗಿ ಯುಟ್ಯೂಬ್ ನಲ್ಲಿ ಮಾತನಾಡಿ, ದುಷ್ಮನ್ ಎಲ್ಲಿದ್ದಾರೆ ಎಂದರೆ ಎಲ್ಲಾ ಕಡೆ ಇದ್ದಾರೆ ಎನ್ನುವ ಸ್ಥಿತಿ ಇದು ಎಂದು ಹೇಳಿದ್ದಾರೆ. ಅಲ್ಲದೆ ನಮ್ಮ ಅಮ್ಮ ನೆಮ್ಮದಿಯಾಗಿ ಇದ್ದಾರೆ ಅವರ ನೆಮ್ಮದಿ ಹಾಳು ಮಾಡುವ ಕೆಲ್ಸ ಮಾಡ್ಬೇಡಿ, ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ ಎಂದು ಮನವಿ ಮಾಡಿದ್ದಾರೆ.