ಟಿ.ನರಸೀಪುರ : ರಾಜ್ಯ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೆರುತ್ತಿದ್ದು ಪಕ್ಷ ನನ್ನ ಅಗತ್ಯವಿದೆ ಎಂದು ಭಾವಿಸಿ ನನ್ನ ಕರೆದರೆ ಡಾ.ರೇವಣ್ಣ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ಪುರಸಭೆ ಸದಸ್ಯ ಹಾಗೂ ನಟ ಅರ್ಜುನ್ ರಮೇಶ್ ಹೇಳಿದ್ದಾರೆ.
ನಮ್ಮ ವರದಿಗಾರರೊಂದಿಗೆ ಮಾತನಾಡಿದ ಅರ್ಜುನ್ ಪಕ್ಷ ನಮ್ಮನ್ನು ಸರಿಯಾದ ರೀತಿಯಲ್ಲಿ ಬಳಸುತ್ತಿಲ್ಲ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಭ್ರಷ್ಟರ ಪರವಾಗಿ ನಿಂತಿದೆ, ತಾಲೂಕಿನಲ್ಲಿ ಅವರು ಆಡಿದ ಆಟ ಆಗಿದೆ. ಇದನೆಲ್ಲ ನಾನು ಪ್ರಶ್ನೆ ಮಾಡಿದ್ದೆ, ಅದಕ್ಕೆ ನನಗೆ ರೋಲ್ ಕಾಲ್ ಗಿರಾಕಿ ಎಂದು ಪಟ್ಟ ಕಟ್ಟಿದ್ರು ಎಂದು ಬೇಸರ ಹೊರ ಹಾಕಿದರು.
ತಾಲೂಕಿನಲ್ಲಿ ಅನೇಕ ಅಕ್ರಮ ಕಟ್ಟಡಗಳಿವೆ, ಅವರ ಅಕ್ರಮದ ದಾಖಲೆಗಳು ನನ್ನ ಬಳಿ ಸೂಕ್ತವಾದ ಸಮಯದಲ್ಲಿ ಇದಕ್ಕೆಲ್ಲಾ ಉತ್ತರ ಕೊಡುತ್ತೇನೆ ಎಂದರು. ಬಿಜೆಪಿ ಅಭ್ಯರ್ಥಿ ರೇವಣ್ಣ ಒಳ್ಳೆಯ ವ್ಯಕ್ತಿ ಇಲ್ಲಿನ ಕೆಲ ವ್ಯಕ್ತಿಗಳು ಅವರನ್ನು ಮಿಸ್ ಗೈಡ್ ಮಾಡುತ್ತಿದ್ದಾರೆ, ರೇವಣ್ಣ ಅಂತ ವ್ಯಕ್ತಿಗಳು ಗೆಲ್ಲಬೇಕು ಎಂದು ಅಭಿಪ್ರಾಯ ಪಟ್ಟರು.
ಪ್ರಚಾರಕ್ಕೆ ನನ್ನನು ಯಾರು ಕರೆದಿಲ್ಲ, ಪಕ್ಷ ಕೂಡ ನನಗೆ ಯಾವುದೇ ಸೂಚನೆ ಕೊಟ್ಟಿಲ್ಲ, ರೇವಣ್ಣ ಕರೆದರೆ ಖಂಡಿತ ಅವರ ಪರ ಪ್ರಚಾರ ಮಾಡ್ತೀನಿ ನಮ್ಮ ಸಮುದಾಯದಲ್ಲಿ 20 ಸಾವಿರ ಮತಗಳಿವೆ ಇದನ್ನು ಮರೆಯಬಾರದು ಎಂದು ಹೇಳಿದರು. ಅಲ್ಲದೆ ಕ್ಷೇತ್ರಕ್ಕೆ ಹೊಸ ಮುಖದ ಅವಶ್ಯಕತೆ ಇದೆ ಇದನ್ನು ಬಿಜೆಪಿ ವರಿಷ್ಠರು ಮನಗಣಬೇಕು ಎಂದರು