ಹುಬ್ಬಳ್ಳಿ : ಹೈ ಕಮಾಂಡ್ ನಿಂದ ಬೆಳಿಗ್ಗೆ ಮಾಹಿತಿ ಬಂತು, ನೀವು ಸೀನಿಯರ್ ಇದ್ದೀರಾ ಹೊಸಬರಿಗೆ ಅವಕಾಶ ಕೊಡಿ ಈ ಬಾರಿ ನಿಮಗೆ ಟಿಕೆಟ್ ಇಲ್ಲ ಎಂದು ವರಿಷ್ಠರು ಹೇಳಿದ್ರು ಬೇಜಾರ್ ಆಯ್ತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ್, ವರಿಷ್ಠರು ಟಿಕೆಟ್ ಇಲ್ಲ ಅಂದ್ರು ನನಗೆ ಬೇಜಾರ್ ಆಗಿದೆ, ಈ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ , ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ , ಬೆಳಿಗ್ಗೆ ಯಡಿಯುರಪ್ಪ ಅವರೊಂದಿಗೆ ಮಾತನಾಡಿದ್ದೇನೆ ಎಂದು ಸ್ಪಷ್ಟ ಪಡಿಸಿದರು

ಈಶ್ವರಪ್ಪ ರಾಜೀನಾಮೆ ವಿಷಯವಾಗಿ ಪ್ರತಿಕ್ರಿಯಿಸಿದ ಶೆಟ್ಟರ್, ಅವರು ವಯಕ್ತಿಕ ನಿರ್ಧಾರ ತೆಗೆದುಕೊಂಡಿದ್ದೇವೆ ನಾನು ನನ್ನ ನಿರ್ಧಾರವನ್ನು ವರಿಷ್ಠರಿಗೆ ಹೇಳಿದ್ದೇನೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು.