ಬೆಂಗಳೂರು : ಸಿವಿಲ್ ನ್ಯಾಯಾಲಯ ಬೆಂಗಳೂರು, ರೋಹಿಣಿ ಸಿಂಧೂರಿ ಹಾಕಿದ ಅರ್ಜಿಯ ಮೇಲೆ, ಡಿ. ರೂಪಾ ಹಾಗೂ ಇತರರ ವಿರುದ್ಧ ಏಕ ಪಕ್ಷಿಯ ಪ್ರತಿಬಂಧಕ ಆದೇಶ ನೀಡಿತ್ತು.
ಡಿ. ರೂಪಾರವರು ಉಚ್ಛ ನ್ಯಾಯಾಲಯ ದಲ್ಲಿ ರಿಟ್ ಅರ್ಜಿ ಸಲ್ಲಿಸಿ ಸಿವಿಲ್ ನ್ಯಾಯಲಯದ ಆದೇಶವನ್ನು ಪ್ರಶ್ನಿಸಿದ್ದರು.ಕರ್ನಾಟಕ ಉಚ್ಚ ನ್ಯಾಯಾಲಯ ಡಿ. ರೂಪಾರವರ ರಿಟ್ ಅರ್ಜಿ ಪುರಸ್ಕರಿಸಿ, ಸಿವಿಲ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಡಿ. ರೂಪರವರ ವಿರುದ್ಧ ಈಗ ಯಾವುದೇ ಪ್ರತಿಬಂಧಕ ಆದೇಶ ಇರುವುದಿಲ್ಲ. ಡಿ ರೂಪಾ ಅವರ ಪರವಾಗಿ ಶ್ರೀ ಮಧುಕರ್ ದೇಶಪಾಂಡೆ ವಾದ ಮಂಡಿಸಿದ್ದರು.