– ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಕಿಡಿ
– ಅಮುಲ್ ನಂದಿನಿ ವಿಚಾರ
– ಸುದ್ದಿಗೋಷ್ಠಿ ನಡೆಸಿ ನಂದಿನಿ ಉಳಿಸಿ ಎಂದ ಪುಷ್ಪ ಅಮರನಾಥ್
ಮೈಸೂರು : ಬಿಳಿ ಕ್ರಾಂತಿ ಮಾಡಿದ್ದು ಇಂದಿರಾಗಾಂಧಿ, ನಂದಿನಿ ಉಳಿಸಿ ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ರಾಜ್ಯ ಮಹಿಳಾ ಅಧ್ಯಕ್ಷೆ ಪುಷ್ಪ ಅಮರನಾಥ್ ಹೇಳಿದರು
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ನಂದಿನಿ ಹಾಗೂ ಅಮುಲ್ ವಿಚಾರಕ್ಕೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ನಂದಿನಿ ಉಳಿಸಿ ಎಂಬ ಟ್ಯಾಗ್ ಅಡಿಯಲ್ಲಿ ಜನರು ಪೋಸ್ಟ್ ಮಾಡುತ್ತಿದ್ದಾರೆ. ಕನ್ನಡಿಗರ ಅಸ್ಮಿತೆ ನಮ್ಮ ನಂದಿನಿ ಬಿಜೆಪಿಗರು ಎಲ್ಲವನ್ನೂ ಗುಜರಾತಿಗಳ ಕೈ ಗೆ ಕೊಡಲು ಹೊರಟಿದೆ ಎಂದು ಆರೋಪಿಸಿದರು.
ಬಿಳಿ ಕ್ರಾಂತಿ ಮಾಡಿದ್ದು ನಮ್ಮ ಇಂದಿರಾ ಗಾಂಧಿ, ಕಳೆದ ಬಾರಿ ಹಾಲು ಉತ್ಪಾದಕರ ರೈತರಿಗೆ ಪ್ರೋತ್ಸಾಹ ನೀಡಿದ್ದು ಸಿದ್ದರಾಮಯ್ಯ ಸರ್ಕಾರ, ರೈತರಿಗೆ ಬಿಜೆಪಿ ಕೊಡುಗೆ ಶೂನ್ಯ ಎಂದು ತಿಳಿಸಿದರು. ಅಲ್ಲದೆ ನಂದಿನಿ ಉಳಿಸಿ ಎಂಬ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಿ ಸರ್ಕಾರಕ್ಕೆ ನೀಡಿದರು.