ಮೈಸೂರು : ಹುಣಸೂರಿನ ಸಹಾಯಕ ಸಾರಿಗೆ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದ್ದಾರೆ.ಈ ವೇಳೆ
ಕಚೇರಿ ಆವರಣದಲ್ಲಿದ್ದ ಬ್ರೋಕರ್ ಗಳು ಪರಾರಿಯಾಗಿದ್ದಾರೆ.
ಕಚೇರಿ ಎದುರು ಅನಧಿಕೃತವಾಗಿ ದಾಖಲಾತಿ ಮಾಡಿಕೊಡುತ್ತಿದ್ದ ಓಮಿನಿ ವಶಪಡಿಸಿಕೊಳ್ಳಲಾಗಿದೆ.
ಕಾರಿನಲ್ಲಿ ದ್ದ ಲ್ಯಾಪ್ ಟಾಪ್ ಸ್ಕ್ಯಾನರ್ ಮತ್ತಿತರ ದಾಖಲಾತಿಗಳನ್ನ ವಶಕ್ಕೆ ಪಡೆಯಲಾಗಿದೆ.
ಸಾರ್ವಜನಿಕರ ಕೆಲಸದಲ್ಲಿ ವಿಳಂಬವಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ ಪಿ ಸಜೀತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಆರು ತಿಂಗಳಿನಿಂದ ಪೆಡಿಂಗ್ ಇಟ್ಟಿರುವ ಕಡತಗಳು, ಕಂಪ್ಯೂಟರ್ ಡೇಟಾ ಪರಿಶೀಲನೆ ನಡೆಸಿದ್ದಾರೆ.
ಕಚೇರಿಯ ಸಿಬ್ಬಂದಿ ಹಾಗೂ ಎಆರ್ ಟಿ ಓ ಭಗವಾನ್ ದಾಸ್ ರಂದಲೂ ಮಾಹಿತಿ ಪಡೆದಿದ್ದಾರೆ.
ನಂತರ
ಮಾತನಾಡಿದ ಲೊಕಾಯುಕ್ತ ಎಸ್ ಪಿ ಸಜೀತ್ ರವರು ಸಾಕಷ್ಟು ದೂರಿನ ಹಿನ್ನೆಲೆಯಲ್ಲಿ ಕಡತಗಳನ್ನು ಪರಿಶೀಲಿಸಲಾಗುತ್ತಿದೆ.
ಸಾರಿಗೆ ಇಲಾಖೆಯ ಸಾರಥಿಯಲ್ಲಿ ಅಪ್ ಲೋಡ್ ಮಾಡಲು ಗೊತ್ತಿಲ್ಲದವರು ಹೊರಗೆ ಕಾರಿನಲ್ಲಿ ಮಾಡಿಸಲು ದಾಖಲಾತಿ ನೀಡಿದ್ದಾರೆ. ಇಲಾಖೆಯಲ್ಲಿ 28 ರೀತಿಯ ಸೌಲಬ್ಯಗಳಿದ್ದು. ಎಲ್ಲವನ್ನೂ ಕುಲಂಕುಷವಾಗಿ ಪರಿಶೀಲಿಸಲಾಗುವುದು ತಪ್ಪು ಕಂಡು ಬಂದಲ್ಲಿ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದೆಂದು ತಿಳಿಸಿದ್ದಾರೆ.
ದಾಳಿಯಲ್ಲಿ ಡಿವೈಎಸ್ ಪಿ ಕೃಷ್ಣಪ್ಪ. ಇನ್ಸ್ ಪೆಕ್ಟರ್ ರೂಪಾ. ಸಬ್ ಇನ್ಸ್ ಪೆಕ್ಟರ್ ಮಹೇಶ್ ಹಾಗೂ ಸಬ್ಬಂದಿಗಳಿ ಬಾಗವಹಿಸಿದ್ದರು…
ಹುಣಸೂರು ARTO ಕಚೇರಿ ಮೇಲೆ ಲೋಕಾಯುಕ್ತ ದಾಳಿ : ದಾಖಲೆಗಳ ಪರಿಶೀಲನೆ

Leave a comment
Leave a comment