ಮೈಸೂರು : ಯದುವೀರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ನಿಲ್ಲಿಸದಂತೆ ಮಾಡಿಕೊಂಡ ಮನವಿಗೆ ಸಿಎಂ, ಡಿಸಿಎಂ ಸ್ಪಂದಿಸಲಿಲ್ಲ. ಅಭ್ಯರ್ಥಿಯನ್ನು ನಿಲ್ಲಿಸಿ ಒಂದು ಲಕ್ಕಕ್ಕೂ ಹೆಚ್ಚು ಮತಗಳಿಂದ ಸೋಲಾಗಿದೆ. ಜನರು ಮಹಾರಾಜರನ್ನೇ ಗೆಲ್ಲಿಸಿದ್ದಾರೆ.
ಜಾತಿ ವಿಚಾರ ಮುಂದಿಟ್ಟುಕೊಂಡು ಮತಯಾಚನೆ ಮಾಡಿದವರಿಗೆ ತಕ್ಕ ಪಾಠ ಕಲಿಸಿದ್ದಾರೆ.
ಜನರು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗಿಂತ, ಸರ್ಕಾರ ನಡೆಸುವ ನಾಯಕರ ನಡವಳಿಕೆಗಳನ್ನು ಗಮನಿಸುತ್ತಾರೆ
ಸಿಎಂ ಏಕ ವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು.ತಮ್ಮ ದುರಂಕಾರದ ಮಾತುಗಳ ನಡವಳಿಕೆಯನ್ನು ನಿಲ್ಲಿಸಬೇಕು ಎಂದು ವಿಶ್ವನಾಥ್ ಹರಿಹಾಯ್ದರು.
ನಾಯಕರಾದವರು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು.
ಜನರ ನಡುವೆ ಒಡಕುಂಟು ಮಾಡುವ ಮಾತುಗಳನ್ನು
ನಾಯಕರು ಆಡಬಾರದು.ಪ್ರಚೋದನಾಕಾರಿ ಹೇಳಿಕೆ ಕೊಡುವ ಮೋದಿ ನಡೆಯನ್ನೂ ಖಂಡಿಸಿದ ವಿಶ್ವನಾಥ್.
ಇನ್ನೂ ಗೆಲುವು ಸಾಧಿಸಿರುವ ಯದವೀರ್ ಅವರಿಗೂ ಸಾಕಷ್ಟು ಜವಾಬ್ದಾರಿಗಳು ಇವೆ.ಇನ್ನು ಮುಂದಾದರೂ ಸರ್ಕಾರ ಯದವೀರ್ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು.
ಮೂವರು ಮಾಜಿ ಮುಖ್ಯಮಂತ್ರಿಗಳು ಸಂಸದರಾಗಿ ಆಯ್ಕೆಯಾಗಿರುವುದು ವಿಶೇಷ
ಎಲ್ಲಾ ಸಂಸದರು ಒಗ್ಗಟ್ಟಿನಿಂದ ರಾಜ್ಯದ ಅಭಿವೃದ್ಧಿಗೆ ಸ್ಪಂದಿಸಬೇಕು ಎಂದು
ಎಂಎಲ್ಸಿ ಎಚ್ ವಿಶ್ವನಾಥ್ ಕಿವಿಮಾತು ಹೇಳಿದರು.