ಮೈಸೂರು : ಮಹಿಳೆಯ ಮೇಲೆ ಕಾಮದೃಷ್ಟಿಯಿಂದ ನೋಡುತ್ತಿದ್ದ ಕಿರಾತಕನೊಬ್ಬ ಆಕೆಯ ಶೀಲದ ಬಗ್ಗೆ ಅಪಪ್ರಚಾರ ಮಾಡಿದ ಪರಿಣಾಮ ಮನನೊಂದ ಗೃಹಿಣಿ ನೇಣಿಗೆ ಶರಣಾದ ಘಟನೆ ಮೈಸೂರಿನ ಗಾಂಧಿನಗರದಲ್ಲಿ ನಡೆದಿದೆ.ವಿಜಯಲಕ್ಷ್ಮಿ(40) ಮೃತ ಗೃಹಿಣಿ.ಘಟನೆಗೆ ಸಂಭಂಧಿಸಿದಂತೆ ಕಾಮದೃಷ್ಟಿ ಬೀರಿ ಅಪಪ್ರಚಾರ ಮಾಡಿದ ದಡದಹಳ್ಳಿ ಗ್ರಾಮದ ನಿವಾಸಿ ನಾಗರಾಜು ಸೇರಿದಂತೆ 7 ಮಂದಿ ವಿರುದ್ದ ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಲಕ್ಷ್ಮಿ ಹಾಗೂ ಕುಟುಂಬ ದಡದಹಳ್ಳಿ ಗ್ರಾಮದ ನಿವಾಸಿಗಳು.ಅದೇ ಗ್ರಾಮದ ನಾಗರಾಜು ಆಗಾಗ ವಿಜಯಲಕ್ಷ್ಮಿ ಮೇಲೆ ಕಾಮದೃಷ್ಟಿ ಬೀರಿ ಕಿರೀಕ್ ಮಾಡುತ್ತಿದ್ದ.ಪಾನಮತ್ತನಾಗಿ ವಿಜಯಲಕ್ಷ್ಮಿ ವಿರುದ್ದ ಅಪಪ್ರಚಾರ ಮಾಡುವುದು,ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ.ಈ ವಿಚಾರದಲ್ಲಿ ವಿಜಯಲಕ್ಷ್ಮಿ ಮಗ ಅಭಿ ಗಲಾಟೆ ಮಾಡಿದಾಗ ನಾಗರಾಜ್ ಸೇರಿದಂತೆ ಹಲವರು ಮನೆಗೆ ನುಗ್ಗಿ ಧ್ವಂಸ ಮಾಡಿದ್ದರು.ಈ ಗಲಾಟೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.
ಶೀಲದ ಬಗ್ಗೆ ಅಪಪ್ರಚಾರ ಮಾಡಿದ ಹಿನ್ನಲೆ ಮನನೊಂದ ವಿಜಯಲಕ್ಷ್ಮಿ ಗಾಂಧಿನಗರದ ಬಳಿ ಇರುವ ಸಿದ್ದಾರ್ಥ ಪಾರ್ಕ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ವಿಜಯಲಕ್ಷ್ಮಿ ಸಾವಿಗೆ ಅಪಪ್ರಚಾರ ಮಾಡಿದ ನಾಗರಾಜ್ ಸೇರಿದಂತೆ ರಾಜಮ್ಮ,ಗೋವಿಂದರಾಜು,ನಂಜುಂಡ,ನಾರಾಯಣ,ನಂಜಪ್ಪ ಹಾಗೂ ಸ್ವಾಮಿ ಎಂಬುವರ ವಿರುದ್ದ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ