ಮೈಸೂರು : ಅದ್ದೂರಿಯಾಗಿ ನಡೆದ 100ನೇ ವರ್ಷದ ಮೈಸೂರು ಕರಗ ಮಹೋತ್ಸವ. ಮೈಸೂರಿನ ಇಟ್ಟಿಗೆಗೂಡು ಶ್ರೀ ಚಾಮುಂಡೇಶ್ವರಿ ಮತ್ತು ಮಾರಿಯಮ್ಮನವರ ಕರಗ ಮಹೋತ್ಸವ.
ಕರಗಕ್ಕೆ ಚಾಲನೆ ನೀಡಿದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್.
ಪ್ರಾತ ಕಾಲದಲ್ಲಿ ಚಾಮುಂಡೇಶ್ವರಿ ಹಾಗೂ ಮಾರಿಯಮ್ಮ ದೇವಿಗೆ ಪ್ರಥಮ ಅಭಿಷೇಕ, ನಂತರ ಗ್ರಾಮದ ಚತುದಿರ್ಕಿನಲ್ಲಿ ಕಂಕಣ ಕಟ್ಟು ಮೂಲಕ ಕರಗ ಮಹೋತ್ಸವ ಆರಂಭ.ರಾತ್ರಿ 12 ಗಂಟೆ ಸಮಯದಲ್ಲಿ ಅಂಬಲಿ ಪೂಜೆ, ನಂತರ ಅರಿಶಿನ ನೀರಿನ ಓಕುಳಿಯಾಟ, ತಂಬಿಟ್ಟು ಆರತಿ.ಇಟ್ಟಿಗೆಗೂಡಿನಿಂದ ಆರಂಭಗೊಂಡ ಕರಗ ಮಹೋತ್ಸವ ಮೆರವಣಿಗೆ ಪ್ಯಾಲೇಸ್ ರಸ್ತೆ, ನೂರಡಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆ, ಮಿಷನ್ ಆಸ್ಪತ್ರೆ, ಕುರಬಗೇರಿ, ಕುಂಬಾರಗೇರಿ, ಅಶೋಕ ರಸ್ತೆ ಮಾರ್ಗವಾಗಿ ನಜರ್ ಬಾದ್ ಮಾರ್ಗವಾಗಿ ದೇವಸ್ಥಾನ ವಾಪಸ್ ಆಗುವ ಮೂಲಕ ಕರಗ ಮಹೋತ್ಸವ ಸಂಪನ್ನ. 79ಕ್ಕೂ ಹೆಚ್ಚು ಅವಿವಾಹಿತ ಯುವಕರು ಉತ್ಸವದುದ್ದಕ್ಕೂ ಕರಗ ಹೊತ್ತು ಸಾಗಿದರು.