ಮೈಸೂರು : ನೀರು ಸಿಗದೆ ರೋಗಿಗಳು ಪರದಾಟ ನಡೆಸುವಂತೆ ಘಟನೆ ಎಚ್.ಡಿ.ಕೋಟೆ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹನಿ ನೀರಿಗಾಗಿ ರೋಗಿಗಳ ಆಕ್ರಂದನ.
ಡಯಾಲಿಸಿಸ್ ಗೆ ಆಸ್ಪತ್ರೆಗೆ ಬಂದ ರೋಗಿಗಳಿಗೆ ತಾಕಿದ ನೀರಿದ ತಾಪ. ನೀರಿಲ್ಲದ ಹಿನ್ನೆಲೆ ಡಯಾಲಿಸಿಸ್ ಮಾಡದೆ ರೋಗಿಗಳನ್ನು ವಾಪಸ್ ಮನೆಗೆ ಕಳಿಸಿದ ಆಸ್ಪತ್ರೆ ಸಿಬ್ಬಂದಿಗಳು.ವಿದ್ಯುತ್ ವ್ಯತ್ಯಯದಿಂದಲೂ ನೀರಿಗೆ ತೊಂದರೆ.ವಿದ್ಯುತ್ ಕಡಿತಗೊಂಡಾಗ ನೀರಿನ ಸರಬರಾಜಿಗೆ ಕ್ರಮವಹಿಸಿಕೊಳ್ಳದ ಆಸ್ಪತ್ರೆ ಆಡಳಿತ.
ಸಕಾಲದಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗದೆ ಹೊಟ್ಟೆ ಉಬ್ಬಸ ಉಸಿರಾಟದ ತೊಂದರೆಯಿಂದ ರೋಗಿಗಳ ಬಳಲಾಟ.ಸಮಸ್ಯೆಗಳ ನಡುವೆಯೂ ಅನ್ಯ ಮಾರ್ಗ ಕಾಣದೆ ವಾಪಸ್ ಮನೆಗೆ ಹೊರಟ ಡಯಾಲಿಸಿಸ್ ರೋಗಿಗಳು. ಅಧಿಕಾರಿಗಳು, ರಾಜಕಾರಣಿಗಳಿಗೆ ಹಿಡಿಶಾಪ ಹಾಕಿದ ರೋಗಿಗಳು.