ಮೈಸೂರು : ಮೈಸೂರಿನಲ್ಲಿ ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥವಾಗಿರುವ ಘಟನೆ
ಹುಣಸೂರು ತಾಲ್ಲೂಕು ಕಡೇಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಸ್ವಸ್ಥರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾ.ಪಂ,ಯಿಂದ ಮನೆಗಳಿಗೆ ಪೂರೈಸುವ ನೀರಿನೊಂದಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ವೇಳೆ ಪೈಪ್ ಒಡೆದು ಕಲ್ಮಶ ನೀರು
ಅಡುಗೆ ಹಾಗೂ ಕುಡಿಯಲು ಉಪಯೋಗಿಸಿದ ಪರಿಣಾಮ ಗ್ರಾಮದ ಅನೇಕ ಮಂದಿ ಅಸ್ವಸ್ಥರಾಗಿದ್ದಾರೆ.
ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ.