ಮೈಸೂರು :ಹೆಚ್.ಡಿ ಕೋಟೆಯ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇಂದು ಲೋಕಾಯುಕ್ತಾ ಎಸ್ಪಿ ಎಸ್. ಸುಜೀತ್ ರವರು ಸಾರ್ವಜನಿಕ ರಿಂದ ದೂರುಗಳನ್ನು ಸ್ವೀಕಾರ ಮಾಡಿದರು.
ದೂರು ಸ್ವೀಕರಿಸಿ ಮಾತಾನಾಡಿದ ಅವರು ನಾವು ಸರ್ಕಾರಿ ಅಧಿಕಾರಿಗಳಾಗಿ ಜನರ ಸೇವೆಯನ್ನು ಮಾಡಲು ಬಂದಿದ್ದೆವೆಯೇ ಹೊರತು ಅವರಿಗೆ ತೊಂದರೆ ಕೊಡುವುದಕ್ಕಲ್ಲ.ಲೋಕಾಯುಕ್ತಾರ ಕೆಲಸ ಬರಿ ಲಂಚ ಸ್ವೀಕರಿಸುವಾಗ ಹಿಡಿಯುವುದಲ್ಲ. ಸರ್ಕಾರಿ ಅಧಿಕಾರಿಗಳ ಕರ್ತವ್ಯಲೋಪ. ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿರುವುದು. ಅಧಿಕಾರವನ್ನ ದುರುಪಯೋಗ ಮಾಡಿಕೊಳ್ಳುವುದು. ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದು ಇನ್ನೂ ಮುಂತಾದ ನ್ಯೂನತೆಗಳ ಬಗ್ಗೆ ನಿಗ ವಹಿಸುವುದಾಗಿದೆ. ಅದ್ದರಿಂದ ಪ್ರತಿಯೊಬ್ಬ ಅಧಿಕಾರಿಯೂ ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಸಾರ್ವಜನಿಕರಿಂದ ದೂರುಗಳ ಸುರಿಮಳೆಯೇ ಹರಿದು ಬಂದವು.