ರಾಮನಗರ : ಇಡೀ ಪೆನ್ ಡ್ರೈವ್ ಪ್ರಕರಣದ ಮಾಸ್ಟರ್ ಮೈಂಡ್ ಡಿಕೆ ಶಿವಕುಮಾರ್. ಡಿಸಿಎಂ ಹುದ್ದೆಯಲ್ಲಿ ಅವರಿಗೆ ಮುಂದುವರೆಯುವ ನೈತಿಕತೆ ಇಲ್ಲ. ಮೊದಲು ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಒತ್ತಾಯಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಪಿ ಯೋಗೇಶ್ವರ್, ಪ್ರಜ್ವಲ್ ರೇವಣ್ಣ ವಿಚಾರವನ್ನ ನಾವೂ ಖಂಡಿಸುತ್ತೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಆದರೆ ವಿಡಿಯೋ ಹಂಚಿಕೆ ಮಾಡಿದ್ದು ಎಷ್ಟು ಸರಿ. ಸಂತ್ರಸ್ತೆಯರ ವಿಡಿಯೋ ಹಂಚಿಕೆ ಮಾಡಿರುವುದು ಎಷ್ಟು ಸರಿ. ಈ ಹಿಂದೆ ಟೆಂಟ್ ನಲ್ಲಿ ಸಿನಿಮಾ ತೋರಿಸುತ್ತಿದ್ದರು. ಚಿಕ್ಕ ವಯಸ್ಸಿನ ಚಾಳಿಯನ್ನು ಇದೀಗ ಮುಂದುವರೆಸಿದ್ದಾರೆ ಎಂದು ಗುಡುಗಿದರು.