ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದ್ದು ಈ ಮಧ್ಯೆ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 54.20ರಷ್ಟು ಮತದಾನ ನಡೆದಿದೆ.
ಚಿಕ್ಕೋಡಿ ಶೇ 59.65 ರಷ್ಟು, ಬಾಗಲಕೋಟೆಯಲ್ಲಿ ಶೇ 54.95ರಷ್ಟು, ಬೆಳಗಾವಿಯಲ್ಲಿ ಶೇ 53.14 ರಷ್ಟು ಬಳ್ಳಾರಿ ಶೇ 56.76ರಷ್ಟು, ಬೀದರ್ ಶೇ 47.89ರಷ್ಟು, ರಾಯಚೂರು ಶೇ49.04 ರಷ್ಟು ಕೊಪ್ಪಳ ಶೇ 55.06 ರಷ್ಟು, ಕಲ್ಬುರ್ಗಿ ಶೇ 47.67 ರಷ್ಟು, ಹಾವೇರಿಯಲ್ಲಿ ಶೇ 58.45ರಷ್ಟು ದಾವಣಗರೆಯಲ್ಲಿ ಶೇ 57.31 ರಷ್ಟು ಮತದಾನವಾಗಿದೆ.
ಧಾರವಾಡದಲ್ಲಿ ಶೇ 55ರಷ್ಟು, ವಿಜಯಪುರದಲ್ಲಿ ಶೇ 49.89ರಷ್ಟು, ಶಿವಮೊಗ್ಗದಲ್ಲಿ ಶೇ 57.96ರಷ್ಟು , ಉತ್ತರ ಕನ್ನಡ 55.98% ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.