ಹೊಸೂರು : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಟಾರ್ ಚಂದ್ರು ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸುವ ಮೂಲಕ ಶಾಸಕ ರವಿಶಂಕರ್ ಅವರ ಕೈ ಬಲಪಡಿಸುವಂತೆ ನಟ ದರ್ಶನ್ ಮನವಿ ಮಾಡಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಇಂದು ನಡೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾದ ಸ್ಟಾರ್ ಚಂದ್ರುರವರು ಮಂಡ್ಯ ಲೋಕಸಭಾ ಕ್ಷೇತ್ರದ ಮನೆ ಮಗನಾಗಿದ್ದು ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ಕಂಕಣಭದ್ಧರಾಗಿದ್ದು ತಾವುಗಳು ಅತಿಹೆಚ್ಚಿನ ಮತ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕ ರವಿಶಂಕರ್ ತಾಪ ಮಾಜಿ ಅಧ್ಯಕ್ಷ ಹಾಡ್ಯ ಮಾದೇವಸ್ವಾಮಿ, ಮುಖಂಡರಾದ ಡೈರಿ ಮಹದೇವ್, ರಮೇಶ್,ಸಲೀಮ್, ಪರಶುರಾಮ್, ಪ್ರಭಾಕರ್, ಜಗದೀಶ್, ಗ್ರಾಪಂ ಉಪಾಧ್ಯಕ್ಷ ನೂತನ್, ಸಂಘಟನೆ ಮಂಜು, ಸಿ. ಜೆ ಪಾಲಾಕ್ಷ, ಶ್ರೀನಿವಾಸ್, ನವೀನ್ ಇತರರು.