ಚಾಮರಾಜನಗರ : ಬಿಸಿಲಿನ ತಾಪಮಾನಕ್ಕೆ ಬಸವಳಿದ್ದ ಕರ್ನಾಟಕ ತಮಿಳುನಾಡು ಗಡಿಯಲ್ಲಿ ಮಳೆರಾಯ ಬಂದು ತಂಪೆರದಿದೆ.
ಕರ್ನಾಟಕ ತಮಿಳುನಾಡು ಗಡಿ ಭಾಗವಾಗಿರುವ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಾಳವಾಡಿ ತಾಲ್ಲೂಕಿನ ಬಹುತೇಕ ಕಡೆ ಮಳೆಯಾಗಿದ್ದು, ಬಿಸಿಲಿನ ತಾಪಮಾನದಲ್ಲಿ ಬಸವಳಿದಿದ್ದ ಸಾರ್ವಜನಿಕರು ಕೊಂಚ ಮಟ್ಟಿಗೆ ನಿಟ್ಟಿಸಿರು ಬಿಟ್ಟಿದಂತಾಗಿದೆ.
ಹಠಾತ್ತಾಗಿ ಬಂದ ಮಳೆಯಿಂದ ಕೆಲವು ಕಡೆ ರೈತರ ಬೆಳೆದ ಬಾಳೆ ಬೆಳೆ ನೆಲಕಚ್ಚಿದ್ದು, ಬಿಟ್ಟರೆ ಮಳೆಯಿಂದ ಗಡಿ ಭಾಗದಲ್ಲಿ ತುಸು ತಂಪಿನ ವಾತಾವರಣ ಸೃಷ್ಟಿಯಾಗಿದೆ. ಮಳೆಯಿಲ್ಲದೆ ಕರ್ನಾಟಕ ತಮಿಳುನಾಡಿ ಗಡಿ ಭಾಗದಲ್ಲಿ ಅತೀವ ಉಷ್ಟಾಂಶದಿಂದ ಕೂಡಿದ್ದ ಪ್ರದೇಶ ಕ್ರಮೇಣ ಉಷ್ಟಾಂಶದ ಪ್ರಮಾಣ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆ ಎನ್ನಲಾಗಿದೆ.