ಹುಣಸೂರು : ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸಿ ಹೈರಾಣರಾಗಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದ ಕಿಕ್ಕೇರಿಕಟ್ಟೆ ಗ್ರಾಮಕ್ಕೆ ತಹಸೀಲ್ದಾರ್ ಪೂರ್ಣಿಮಾ ಭೇಟಿ ನೀಡಿ ಮನ ಒಲಿಸುವ ಯತ್ನ ಮಾಡಿದ್ದಾರೆ.ಮಧ್ಯಾಹ್ನ ರೆವಿನ್ಯೂ ಅಧಿಕಾರಿಗಳು ಭೇಟಿ ನೀಡಿದಾಗ ಹಿರಿಯ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದಿದ್ದರು.
ಈ ಹಿನ್ನಲೆ ತಹಸೀಲ್ದಾರ್ ಹಾಗೂ ಇಓ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖಂಡರ ಮನ ಒಲಿಕೆಗೆ ಮುಂದಾದರು.ಗ್ರಾಮಕ್ಕೆ ಸೂಕ್ತ ರಸ್ತೆ ಇಲ್ಲ,ಅಸಮರ್ಪಕ ವಿದ್ಯುತ್ ಪೂರೈಕೆ,ನೀರಿನ ಅಭಾವ ಸೇರಿದಂತೆ ಹಲವು ಸೌಲಭ್ಯಕ್ಕಾಗಿ ನಿರಂತರವಾಗಿ ಮನವಿ ಮಾಡುತ್ತಿದ್ದರೂ ಯಾವುದೇ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇತ್ತ ತಿರುಗಿ ನೋಡಿರಲಿಲ್ಲ.ಈ ಹಿನ್ನಲೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ರು.ಗ್ರಾಮಸ್ಥರ ಸುದ್ದಿಯಾಗಿತ್ತು.
ಇದರಿಂದ ಎಚ್ಚೆತ್ತ ತಹಸೀಲ್ದಾರ್ ಪೂರ್ಣಿಮ ಹಾಗೂ ಇಓ ಶಿವಕುಮಾರ್ ರವರು ಸಿಬ್ಬಂದಿಗಳ ಸಮೇತ ಕಿಕ್ಕೇರಿಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ ಮುಖಂಡರ ಮನ ಒಲಿಕೆಗೆ ಮುಂದಾದರು.ಅಧಿಕಾರಿಗಳ ಮನವಿಗೆ ಸ್ಪಂದಿಸದ ಗ್ರಾಮಸ್ಥರು ಏಪ್ರಿಲ್ 25 ರವರೆಗೆ ಗಡುವು ನೀಡಿದ್ದಾರೆ.ನಿಗದಿತ ಸಮಯದಲ್ಲಿ ಮೂಲಭೂತ ಸೌಕರ್ಯಗಳು ಲಭ್ಯವಾಗದಿದ್ದಲ್ಲಿ ಚುನಾವಣೆ ಮತದಾನ ಬಹಿಷ್ಕರಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.