ಹುಣಸೂರು ತಾಲೂಕು ಕಿಕ್ಕೇರಿಕಟ್ಟೆ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನ ಒದಗಿಸದ ಹಿನ್ನಲೆ ಬಹಿಷ್ಕಾರ ಹಾಕುವ ಮೂಲಕ ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕಿಕ್ಕೇರಿ ಕಟ್ಟೆ ಗ್ರಾಮದಲ್ಲಿ 200 ಕ್ಕೂ ಹೆಚ್ಚು ಮತದಾರರಿದ್ದಾರೆ.50 ಕ್ಕೂ ಹೆಚ್ಚು ಕುಟುಂಬಗಳಿವೆ.ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ ರಸ್ತೆ,ನೀರು,ವಿದ್ಯುತ್ ಸೇರಿದಂತೆ ಸೌಕರ್ಯಗಳನ್ನ ಸಮರ್ಪಕವಾಗಿ ಪೂರೈಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಯಾವುದೇ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಸ್ಪಂದಿಸಿಲ್ಲ.ಹಲವಾರು ವರ್ಷಗಳಿಂದ ನಮ್ಮ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಹೊರತು ಯಾವುದೇ ಪರಿಹಾರ ದೊರೆತಿಲ್ಲ.ಓಡಾಡಲು ರಸ್ತೆ ಇಲ್ಲದೆ ಅಪಘಾತಗಳು ಹೆಚ್ಚಾಗಿದೆ.ವಿದ್ಯುತ್ ಸೌಕರ್ಯವಿಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ.ನೀರು ಸರಬರಾಜಿಲ್ಲದೆ ಜಮೀನಿನ ಪಂಪ್ ಸೆಟ್ ಮೊರೆ ಹೋಗುವ ಸ್ಥಿತಿ ಬಂದಿದೆ.ಅಲ್ಲದೆ ನಮ್ಮ ಜಮೀನುಗಳಿಗೆ ಆರ್.ಟಿ.ಸಿ.ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ.ಚುನಾವಣೆ ಬಂದ್ರೆ ಮತಕ್ಕಾಗಿ ಗ್ರಾಮಕ್ಕೆ ಬರುವ ಜನಪ್ರತಿನಿಧಿಗಳು ನಂತರ ಇತ್ತ ಸುಳಿಯುತ್ತಿಲ್ಲ.ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಸರ್ಕಾರಗಳು ಸ್ಪಂದಿಸಿಲ್ಲ ಎಂದು ಆರೋಪಿಸುವ ಗ್ರಾಮಸ್ಥರು ಚುನಾವಣೆಯನ್ನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.