ಇಂದು ಪಿರಿಯಾಪಟ್ಟಣ ತಾಲೂಕಿನ ಹಬ್ಬನ ಕುಪ್ಪೆ ಹಾಗೂ ಮಾಕೋಡು ಗ್ರಾಮದಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಜಂಟಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಮಹಾದೇವರು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಒಡೆಯರ್ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮುಖಾಂತರವಾಗಿ ಬಿಜೆಪಿ ಹಾಗೂ ಜೆಡಿಎಸ್ ನ ಎಲ್ಲಾ ಕಾರ್ಯಕರ್ತರು ಶ್ರಮವನ್ನು ಹಾಕಬೇಕು ಕೇಂದ್ರ ಮತ್ತು ನಾನು ಶಾಸಕನಾಗಿರುವಾಗ ಮಾಡಿರುವ ಅನೇಕ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುವ ಮುಖಾಂತರವಾಗಿ ಪ್ರತಿಭೂತಗಳಲ್ಲೂ ಹೆಚ್ಚಿನ ಮತಗಳು ಬರುವ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯದುವೀರ್ ಒಡೆಯರ್ ನಾನು ನರೇಂದ್ರ ಮೋದಿಯವರ ಅಪೇಕ್ಷೆಯಂತೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ ನಿಮ್ಮೆಲ್ಲರ ಸಹಕಾರ ನನಗಿರಲಿ 2047ರ ವಿಕಸಿತ ಭಾರತದ ಮೋದಿಯವರ ಗುರಿಯನ್ನು ನಾವೆಲ್ಲರೂ ತಲುಪಲು ಶ್ರಮವನ್ನು ಹಾಕೋಣ ಕಮಲದ ಗುರುತಿಗೆ ತಾವೆಲ್ಲರೂ ಮತವನ್ನು ಹಾಕುವ ಮುಖಾಂತರವಾಗಿ ಮೋದಿಯವರನ್ನು ತಾವೆಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು.