ಚಾಮರಾಜನಗರ: ನಗರದಲ್ಲಿ ಸಡಗರ ಹಾಗೂ ಸೌಹಾರ್ದತೆಯಿಂದ ರಂಜಾನ್ ಹಬ್ಬ ಆಚರಿಸಲಾಯಿತು.
ನಗರದ ಸತ್ತಿ ರಸ್ತೆಯಲ್ಲಿರುವ ಈದ್ಗಾ ಮೈದಾನ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದಲ್ಲಿರುವ ಈದ್ಗಾ ಮೈದಾನದಲ್ಲಿ ಪ್ರತೇಕವಾಗಿ ಸಡಗರದಿಂದ ಸಾಮೋಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಈವೇಳೆ ಮೌಲಾನಾ ಅಬ್ದುಲ್ ಹಸೀಬ್ ರವರು ಮಾತನಾಡಿ ಒಂದು ತಿಂಗಳ ಸತತವಾಗಿ ಉಪವಾಸ ಮಾಡಿದ ಬಳಿಕಾ ಅಲ್ಲಾಹನ ಕ್ರುಪೆ ಪಡೆಯಲು ಸಲುವಾಗಿ ಅರ್ಹ ಬಡವರಲ್ಲಿ ದಾನ ಧರ್ಮ ಮಾಡುವುದೇ ರಂಜಾನ್ ಹಬ್ಬದ ವಿಶೇಷತೆ. ಒಂದು ತಿಂಗಳ ರಂಜಾನ್ ಮಾಹೆಯಲ್ಲಿ ಹಸಿವು ಅನುಭವಿಸಿ ಎಲ್ಲಾ ರೀತಿಯ ಕಟ್ಟುನಿಟ್ಟಿನ ಆದೇಶಗಳನ್ನು ಪಾಲಿಸಿ ಪ್ರಾರ್ಥನೆ ಮಾಡಿ ಖುರಾನ್ ಓದುವ ಮೂಲಕ ತನ್ನನ್ನು ಪಾರದರ್ಶಕತೆಯ ಹಾದಿಯಲ್ಲಿ ಕೂಂಡು ಕೂಂಡು ಸಾಗಿ ಇತರರಿಗೆ ಮಾದರಿಯಾಗ ಬೇಕು. ಮುಸ್ಲಿಂ ಬಾಂಧವರು ತಮ್ಮಲ್ಲಿರುವ ಪ್ರೀತಿ ವಿಶ್ವಾಸ ಸಹನೆ ಭಾವೈಕ್ಯತೆ ಹಂಚುವ ಮೂಲಕ ಹಬ್ಬದ ಆಚರಣೆಗೆ ಆಧ್ಯತೆ ನೀಡಬೇಕು ಮತ್ತು ಜಿಲ್ಲೆಯಾದ್ಯಂತ ವಿರುವ ಎಲ್ಲಾ ಮುಸ್ಲಿಂ ಬಾಂಧವರು ನೂರಕ್ಕು ನೂರ ಮತಚಲಾಯಿಸಬೇಕು ಯಾವುದೇಕಾರಣಕ್ಕು ಮೈಮರೆಯಬೇಡಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಚಾಮರಾಜನಗರ ಈದ್ಗಾ ಕಮೀಟಿಯ ಮುಖ್ಯಸ್ಥರು ಅಕ್ರಮ್ ಪಾಷ. ಆಸಿಫ್ ಉಳ್ಳ. ಮಹಮ್ಮದ್ ಜಾವೀದ್. ನಯಾಜ್ ಉಲ್ಲಾ. ಸಿ. ಮುಕ್ತಾರ್ ಪಾಷ. ನವಾಜ್. ನವೀದ್. ಜಿಲ್ಲಾ ವಕ್ಫ್ ಅಧ್ಯಕ್ಷರು ಸೈಯದ್ ಇರ್ಷಾದ್ ಉಲ್ಲಾ. ಮೌಲಾನ ಜಹೀರ್ ಅಹ್ಮದ್ ರಾಹಿ ಫಿದಾಯಿ. ಕಾಮಿಲ್ ನಯೀಮುಲ್ ಹಕ್.ಹಾಫಿಜ್ ಸೈಯದ್ ಮುಕ್ತಾರ್. ಮಹಮ್ಮದ್ ಅಸ್ಗರ್ ಉ ಮುನ್ನ. ಸೈಯದ್ ಅತೀಕ್ ಅಹ್ಮದ್. ಸೇರಿದಂತೆ ಇನ್ನೀತರರು ಭಾಗಿಯಾಗಿದ್ದರು.