ಮೈಸೂರು: ವಿ.ಶ್ರೀನಿವಾಸ ಪ್ರಸಾದ್ ಜತೆ ಮಾತನಾಡಿಲ್ಲ.
ನಾನು ಭೇಟಿಯಾಗಿಲ್ಲ. ದೂರವಾಣಿ ಮೂಲಕವೂ ಮಾತನಾಡಿಲ್ಲ. ಡಾ.ಮಹದೇವಪ್ಪ, ಕೆ.ವೆಂಕಟೇಶ್ ಹೋಗಿ ಭೇಟಿ ಆಗಿದ್ದಾರೆ. ಏನು ಹೇಳಿದ್ದಾರೆ ಅಂತ ಅವರನ್ನೇ ಕೇಳಿ.
ಕಾಂಗ್ರೆಸ್ ಪಕ್ಷಕ್ಕೆ ಅನೇಕರು ಬರುತ್ತಾರೆ. ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಯಾರೇ ಬಂದರೂ ಸ್ವಾಗತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಆಗಿಲ್ಲ. ವಾಸ್ತವದಲ್ಲಿ ಏರಿಕೆ ಆಗಿದೆ.ಹತ್ತು ವರ್ಷದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಏರಿಕೆ ಆಗಿದೆ. 10 ವರ್ಷದ ಹಿಂದೆ ಡೀಸೆಲ್, ಪೆಟ್ರೋಲ್ ಬೆಲೆ ಕಡಿಮೆ ಇತ್ತು. ಗ್ಯಾಸ್ ಸಿಲಿಂಡರ್ 450 ರೂ. ಇತ್ತು. ಈಗ ಡೀಸೆಲ್ ಬೆಲೆ 92 ರೂ., ಪೆಟ್ರೋಲ್ 101 ರೂ. ಇದೆ. ಗ್ಯಾಸ್ ಸಿಲಿಂಡರ್ 950 ರೂ. ಆಗಿದೆ.
ಹೆಚ್ಚಾಯ್ತೋ ಕಡಿಮೆ ಆಯ್ತೋ ? ಈಗ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿದೆ ಎಂದರು.
ಅಭಿವೃದ್ಧಿ ವಿಚಾರವಾಗಿ ಪಿಎಂ ಮೋದಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಅಭಿವೃದ್ಧಿ ಆಗಿದ್ರೆ ತಾನೇ ಟ್ರೇಲರ್. ಸುಳ್ಳಿನ ಪಿಕ್ಚರ್ ಅವರದ್ದು ಬಾಕಿ ಇರಬಹುದು. ಇಲ್ಲಿವರೆಗೆ ಹೇಳಿರುವುದೆಲ್ಲ ಸುಳ್ಳು.
ಅವರು 200 ಕ್ಷೇತ್ರ ಮಾತ್ರ ಗೆಲ್ಲೋದು.
ಕಡಿಮೆ ಸ್ಥಾನ ಬರುತ್ತದೆ ಎಂದು ಗೊತ್ತಾದ ಮೇಲೆಯೇ ಹೆಚ್ಚು ಸ್ಥಾನ ಬರುತ್ತೇವೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.
ಇದು ಕೂಡ ಅವರ ತಂತ್ರಗಾರಿಕೆ
ಕರ್ನಾಟಕ ನನಗೆ ವಿಶ್ವಾಸ ಇದೆ 18ರಿಂದ 20 ಸ್ಥಾನ ಗೆಲ್ಲುತ್ತೇವೆ. ಅವರು ಸಹ ಸರ್ವೆ ಮಾಡಿಸಿದ್ದಾರೆ.
ಅವರು ಗೆಲ್ಲೋದೆ 200 ಕ್ಷೇತ್ರ ಮಾತ್ರ.
ಕರ್ನಾಟಕದಲ್ಲಿ 18 ರಿಂದ 20 ಕ್ಷೇತ್ರ ಗೆದ್ದೆ ಗೆಲ್ಲುತ್ತೇವೆ.
ಈ ಬಾರಿ ಬಿಜೆಪಿಯ ಸುಳ್ಳಿಗೆ ಯಾರೂ ಸಹ ಮರಳಾಗುವುದಿಲ್ಲ. ಮೋದಿಯೂ ಬಂದು ಪ್ರಚಾರ ಮಾಡಲಿ. ವಿಧಾನಸಭೆಯಲ್ಲಿ ಮೋದಿ ಪ್ರಚಾರ ಮಾಡಿದ್ರು, ಆಗ ಏನಾಯಿತು ಎಂಬುದು ಗೊತ್ತಿದೆ. ಈಗಲೂ ಮಾಡಲಿ ಬಿಡಿ ಎಂದು ಹೇಳಿದರು.