ನಂಜನಗೂಡು : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆನೂ ಇಲ್ಲ ಏನು ಇಲ್ಲ ನಮ್ಮಲ್ಲಿ ಯಾವುದೇ ಗೊಂದಲೇ ಇಲ್ಲ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು ಕಳೆದ ಬಾರಿ ದಿವಂಗತ ಧ್ರುವ ನಾರಾಯಣ್ ಅವರು, ಕೆಲವೇ ಅಂತರ ಮತಗಳಿಂದ ಸೋತಿದ್ದರು ಆದರೂ ಸಹ ನಮ್ಮ ಈ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು ಈ ಬಾರಿಯೂ ಕಾಂಗ್ರೆಸ್ ಪಕ್ಷದ ಗೆಲುವು ಖಚಿತ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಹೇಳಿದರು.
ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದ ಬಳಿ ಇರುವ ಮಲ್ಲನ ಮೂಲೆ ಮಠಕ್ಕೆ ಸುನಿಲ್ ಬೋಸ್ ರವರು ಭೇಟಿ ನೀಡಿ ಮಠಾಧೀಶರಾದ ಶ್ರೀ ಚನ್ನಬಸವ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಿ ಆಶಿರ್ವಾದ ಪಡೆದುಕೊಂಡರು ಬಳಿಕ ಸುನಿಲ್ ಬೋಸ್ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ಹಲವಾರು ಮಂದಿ ಆಕಾಂಕ್ಷಿಗಳಿದ್ದರು ಅದರಲ್ಲಿ ನನ್ನನ್ನು ಗುರುತಿಸಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಹಾಗೂ ಪಕ್ಷದ ಎಲ್ಲಾ ಹಿರಿಯ ನಾಯಕರುಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
ನಾವು ಈಗಾಗಲೇ ಎಲ್ಲ ಕ್ಷೇತ್ರಗಳಲ್ಲೂ ಪ್ರವಾಸ ಕೈಗೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ ಹೋದ ಕಡೆಯಲಿಲ್ಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ವಾತಾವರಣ ನಿರ್ಮಾಣವಾಗಿದ್ದು ಪಕ್ಷದ ಗೆಲುವಿಗೆ ಸಹಕಾರ ನೀಡಬೇಕು ಎಂದು ಸಂಸದರಾದ ವಿ ಶ್ರೀನಿವಾಸ ಪ್ರಸಾದ್ ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇವೆ ಅವರು ಸಹ ನಮಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರಶೈವ ಮುಖಂಡರಾದ ಬುಲೆಟ್ ಮಹಾದೇವಪ್ಪ ತರಗನಹಳ್ಳಿ ನಂಜುಂಡಸ್ವಾಮಿ ಶ್ರೀಕಂಠೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜೆಗೆ ಇಂಧನ ಬಾಬು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತಮ್ಮನಗೌಡ ಮುಖಂಡರಾದ ಕೆ ಬಿ ಸ್ವಾಮಿ ಗಿರೀಶ್ ತಾಲೂಕು ಕುರುಬ ಸಂಘದ ಅಧ್ಯಕ್ಷ ಕೆಂಪಣ್ಣ ಬಸವೇಗೌಡ ಚಾಮರಾಜು ಬಿಪಿ ಮಹಾದೇವ ಭಾಸ್ಕರ್ ಕೆ ಎಸ್ ಉಂಡಿ ನಂಜಯ್ಯ ಆನಂದ್ ಹೆಜ್ಜೆಗೆ ಭಾಸ್ಕರ್ ಪುಟ್ಟಣ್ಣ ಕೃಷ್ಣ ರಮೇಶ ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹರ ತಲೆ ಸುರೇಶ್ ಸೋಮಶೇಖರ್ ಬಿದರಗೂಡು ಮಾದೇಶ್ ಸ್ವಾಮಿ ಬೀರಪ್ಪ ಮಹೇಶ ಬಸವನಪುರ ಮಹಾದೇವ ಕತ್ವಡೀಪುರ ಸಿದ್ದಯ್ಯ ಸೇರಿದಂತೆ ಅನೇಕ ಮುಖಂಡರುಗಳು ಹಾಜರಿದ್ದರು.