ಮೈಸೂರು ಕೊಡಗು ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾಗಿ ನಾಡ ದೊರೆ ಯದುವೀರ್ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರ್ ಘೋಷಣೆ ಹಿನ್ನೆಲೆಯಲ್ಲಿ ಸ್ವಾಗತಿಸಿ ಅಪೂರ್ವ ಸ್ನೇಹ ಬಳಗ ವತಿಯಿಂದ ಮೈಸೂರು ಪಾಕ್ ವಿತರಿಸಿದರು
ನಗರದ ಅರಮನೆಯ ಮುಂಭಾಗ ಜಮಾಯಿಸಿದ ಅಪೂರ್ವ ಸ್ನೇಹ ಬಳಗದ ಸದಸ್ಯರುಗಳು ನಾಡಿನ ದೊರೆ ಮಹಾರಾಜರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರಿಗೆ ಜೈಕಾರ ಕೂಗಿದರು.
ನಂತರ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಪಕ್ಷದ ವರಿಷ್ಠರು ಮೈಸೂರು ರಾಜ ವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಅವಕಾಶ ಕಲ್ಪಿಸಿ ಕೊಟ್ಟಿರುವುದು ಸ್ವಾಗತಾರ್ಹ ಈ ನಡುವೆ ಪ್ರತಾಪ್ ಸಿಂಹ ಕೂಡ ಅವರನ್ನು ಬೆಂಬಲಿಸುವ ಹೇಳಿಕೆ ನೀಡಿದ್ದು ಸ್ವಾಗತಾರ್ಹವಾಗಿದ್ದು, ಇದನ್ನೇ ಸ್ಫೂರ್ತಿಯಾಗಿಸಿಕೊಂಡು ಎಲ್ಲಾ ಸಮಾನಾಮನಸ್ಕರು ಹಾಗೂ ಪಕ್ಷದ ಕಾರ್ಯಕರ್ತರು ಬಿಜೆಪಿ ಗೆಲ್ಲಿಸಲು ಮುಂದಾಗಬೇಕು ಎಂದು ಹೇಳಿದರು, ದೇಶದ ಹಿತಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲೇಬೇಕು , ನಾವೆಲ್ಲರೂ ಕೇಂದ್ರ ಸರ್ಕಾರದ ಸಾಧನೆಯ ಕರಪತ್ರವನ್ನು ಪ್ರತಿಯೊಬ್ಬರಿಗೂ ತಲುಪಿಸಲು ಮುಂದಾಗುತ್ತೇವೆ, ಪ್ರತಾಪ್ ಸಿಂಹ ಅವರು ಪಕ್ಷದ ವ್ಯವಸ್ಥೆಯಲ್ಲಿ ಮುಂದೆ ಖಂಡಿತವಾಗಿಯೂ ಉತ್ತಮ ಸ್ಥಾನ ಪಡೆಯುತ್ತಾರೆ, ಅವರನ್ನು ನಾಯಕರು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ, ಪ್ರತಾಪ್ ಸಿಂಹ ಕಳೆದ 10 ವರ್ಷದಲ್ಲಿ ಉತ್ತಮ ಕಾರ್ಯ ಯೋಜನೆ ಜಾರಿ ಮಾಡಿದ್ದಾರೆ, ಅದನ್ನು ಸ್ಮರಿಸಿಕೊಳ್ಳುವುದರ ಜೊತೆಗೆ ಈಗಿನ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಹೇಳಿದರು
ಅಪೂರ್ವ ಸುರೇಶ್, ದಯಾನಂದ, ಸುಚಿಂದ್ರ, ಮಿರ್ಲೆ ಪನೀಶ್, ನಾಗಶ್ರೀ, ಚಕ್ರಪಾಣಿ, ಅಕ್ಷಯ್ ಅರಸ್, ಭರತ್, ಕೆಂಗೇಗೌಡ, ನವೀನ್ , ನಾರಾಯಣ, ಕಾರ್ತಿಕ್, ಅಕುಲ್ ಬಾಷಾ, ನಾಗರಾಜ್, ಪುರುಷೋತ್ತಮ್, ಸೇರಿದಂತೆ ಸ್ಥಳೀಯ ವ್ಯಾಪಾರಸ್ಥರು ಇನ್ನಿತರರು ಹಾಜರಿದ್ದರು