ಮೈಸೂರು : ಸಂವಿಧಾನ ಬದಲಾಯಿಸುವುದಾಗಿ ಹೇಳಿಕೆ ನೀಡಿರುವ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಮೈಸೂರಿನ ವರ ಭವನದ ಆವರಣದಲ್ಲಿರುವ ವಿಶ್ವ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಮೈಸೂರಿನ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಂವಿಧಾನ ಬದಲಾಯಿಸುವುದಾಗಿ ಹೇಳಿಕೆ ನೀಡಿರುವ ಅನಂತಕುಮಾರ್ ಹೆಗ್ಗಡೆಯನ್ನು, ಪ್ರಧಾನಿ ರಾಘವೇಂದ್ರ ಮೋದಿಯವರು ತಮಗೆ ಬದ್ಧತೆ ಇದ್ದಲ್ಲಿ ಸಂವಿಧಾನದ ಮೇಲೆ ಗೌರವ ಇದ್ದಲ್ಲಿ ಅವರನ್ನು ಕೂಡಲೇ ಪಕ್ಷದಿಂದ ಉಚ್ಚಾಟಿಸಬೇಕು, ಮತ್ತು ಅವರ ವಿರುದ್ಧ ಕ್ರಮ ಜರುಗಿಸಬೇಕು, ಮತ್ತು ಆದ ಸಂವಿಧಾನ ವಿರೋಧಿ ಪ್ರಜಾಪ್ರಭುತ್ವ ವಿರೋಧಿ ದೇಶದ್ರೋಹಿ ಆಗಿರುವುದರಿಂದ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ. ಕೆ. ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್, ಮತ್ತು ಎಲ್ಲಾ ದಲಿತ ಸಂಘಟನೆಯ ಹೋರಾಟಗಾರರು ಪ್ರಮುಕರುಗಳು ಭಾಗಿಯಾಗಿ ಅನಂತಕುಮಾರ್ ಹೆಗ್ಡೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಸಂವಿಧಾನ ಉಳಿಸುವುದು, ನಮ್ಮ ಅಧ್ಯಕ್ಷನಾಗಿ, ಸಂವಿಧಾನಕ್ಕೆ ಧಕ್ಕೆ ಉಂಟಾದರೆ ದೇಶದಲ್ಲಿ ರಕ್ತಪಾತ ನಡೆಯುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.