ಚಾಮರಾಜನಗರ : ಎರಡು ತಲೆ ಇರುವ ಕರುವೊಂದಕ್ಕೆ ಹಸುವೊಂದು ಜನ್ಮ ನೀಡಿದ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ಗುಮ್ಮಟಾಪುರದಲ್ಲಿ ಸೋಮವಾರ ನಡೆದಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ತಾಲ್ಲೂಕಿನ ಗುಮ್ಮಟಾಪುರ ಗ್ರಾಮದಲ್ಲಿ ವಾಸವಾಗಿರುವ ಕುಮಾರ್ ಎಂಬುವವರಿಗೆ ಸೇರಿದ ಹಸುವೊಂದು ಎರಡು ತಲೆವುಳ್ಳ ಕರುವಿಗೆ ಜನ್ಮ ನೀಡಿದ್ದು, ಅಚ್ಚರಿ ಘಟನೆ ಸುದ್ದಿತಿಳಿಯುತ್ತಿದ್ದಂತೆ ಸಾರ್ವಜನಿಕರು ಕುಮಾರ ರವರ ಮನೆಯ ಮುಂದೆ ಜಮಾಯಿಸಲು ಮುಂದಾದರು.
ಆದರೆ ಎರಡು ತಲೆವುಳ್ಳ ಕರುವು ಹೆಜ್ಜಿನ ಸಮಯ ಬದುಕದೆ ಸಾವನ್ನಪ್ಪಿತ್ತು.