ಮೈಸೂರು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮೈಸೂರಿನ ನ್ಯಾಯಾಲಯದ ಮುಂಭಾಗದಿಂದ ಎಂ ಜಿ ರೋಡ್ , ಆರ್ ಟಿ ಓ ರಾಮಸ್ವಾಮಿ ವೃತ್ತ, ಬಳಿಕ ಭಾರತೀಯ ಜನತಾ ಪಾರ್ಟಿಯ ಮುಂಭಾಗ ವರೆಗೆ ಮ್ಯಾರಥಾನ್ ಕಾರ್ಯಕ್ರಮವನ್ನು ನಾರಿ ಶಕ್ತಿ ಕಾರ್ಯಕ್ರಮದ ಅಡಿಯಲ್ಲಿ ರನ್ ಫಾರ್ ನೇಷನ್, ರನ್ ಫಾರ್ ಮೋದಿ ಎನ್ನುವ, ಘೋಷಣೆ ಕೂಗುತ್ತಾ ಮ್ಯಾರಥಾನ್ ಸಾಗಿದರು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ನಾರಿ ಶಕ್ತಿ ವಂದನ ಮೂಲಕ ಪ್ರತಿ ರಾಜ್ಯದಲ್ಲಿನ ಸ್ವಸಹಾಯ ಸಂಘಗಳಿಗೆ ನಗರ ಮತ್ತು ಗ್ರಾಮೀಣ ಭಾಗದ ಸ್ತ್ರೀಯರಿಗೆ (ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ) ಕೇಂದ್ರದ ಹಲವಾರು ಯೋಜನೆಗಳನ್ನು ತಲುಪಿಸುವುದು ಹಾಗೂ ತಿಳುವಳಿಕೆ ಹೇಳುವ ಕಾರ್ಯಕ್ರಮವಾಗಿದೆ , ಮೋದಿ ಅವರ ಹಲವಾರು ಯೋಜನೆಗಳು ಸ್ವಉದ್ಯೋಗ ಕೈಗೊಳ್ಳಲು ಸಹಕಾರಿಯಾಗಲಿದೆ, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮೋದಿ ಅವರು ಮಹಿಳೆಯರ ಸಬಲೀಕರಿಕ್ಕಾಗಿ ಕೈಗೊಂಡಿರುವ ಯೋಜನೆಗಳನ್ನು ನಗರ ಹಾಗೂ ಗ್ರಾಮದ ಪ್ರತಿಯೊಬ್ಬ ಸ್ತ್ರೀಯರಿಗೂ ಮುಟ್ಟಿಸುವ ಕೆಲಸವಾಗಬೇಕು ಎಂದರು.
ಶಾಸಕರಾದ ಟಿ ಎಸ್ ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಮಹಿಳಾ ಮೋರ್ಚಾ ಅಧ್ಯಕ್ಷ ರೇಣುಕಾ ರಾಜ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಎಚ್ಜಿ ಗಿರಿಧರ್, ಕೇಬಲ್ ಮಹೇಶ್, ಬಿ ಎಮ್ ರಘು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಮಮತಾ ಶೆಟ್ಟಿ, ಮಹಿಳಾ ವಿಭಾಗದ ಪ್ರಭಾರಿ ಹೇಮ ನಂದೀಶ್, ಮಾಜಿ ಉಪ ಮಹಾಪುರಾದ ಡಾಕ್ಟರ್ ರೂಪ, ಮಾಜಿನಗರ ಪಾಲಿಕೆ ಸದಸ್ಯ ಪ್ರಮೀಳಾ ಭರತ್, ಲಕ್ಷ್ಮಿ ಕಿರಣ್ ಗೌಡ, ಸೌಭಾಗ್ಯ ಮೂರ್ತಿ, ಅಲ್ಪಸಂಖ್ಯಾತ ಮೋರ್ಚ ರಾಜ್ಯಾಧ್ಯಕ್ಷರಾದ ಡಾಕ್ಟರ್ ಅನಿಲ್ ಥಾಮಸ್, ಎನ್ ವಿ ಪನೀಶ್, ಹೇಮಂತ್ ಕುಮಾರ್ ಗೌಡ, ಜಯಪ್ರಕಾಶ್ ಗೌಡ , ಹಾಗೂ ಇನ್ನಿತರ ಮೋರ್ಚಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು