ಮೈಸೂರು : ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಕೆ ಆರ್ ಆಸ್ಪತ್ರೆ ತ್ಯಾಜ್ಯ ಘಟಕಕ್ಕೆ ಆಕಸ್ಮಿಕ ಬೆಂಕಿ ಬಿದ್ದಿರುವ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಇಲ್ಲವಾದರೆ ಅಕ್ಕ ಪಕ್ಕದ ಸ್ಥಳಗಳಿಗೂ ಅಗ್ನಿ ವ್ಯಾಪಿಸಿ ದೊಡ್ಡ ಮಟ್ಟದ ಹಾನಿಯಾಗುವ ಸಂಭವವಿತ್ತು.