– ನಾಲ್ವರು ಆರೋಪಿಗಳು ಅಂದರ್
ಮೈಸೂರು : ಆಸ್ತಿಗಾಗಿ ಎರಡನೇ ಹೆಂಡತಿಯನ್ನ ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಪತಿರಾಯನೇ ಕೊಂದ ದಾರುಣ ಘಟನೆ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪತಿಯ ಮೊದಲ ಹೆಂಡತಿ ಮಕ್ಕಳ ವ್ಯಾಮೋಹಕ್ಕೆ ಬಲಿಯಾದ ಎರಡನೇ ಪತ್ನಿ ಅಖಿಲಾ ಬಾನು(46).ಕೊಲೆ ಆರೋಪ ಹೊತ್ತವರು ಪತಿ ಅಬ್ಬ ಥಾಯೂಬ್ ಹಾಗೂ ಮಕ್ಕಳಾದ ಮೊಹಮದ್ ಆಸಿಫ್,ಮೊಹಮದ್ ಥೋಸಿಫ್ ಹಾಗೂ ಮೊಹಮದ್ ಹೈದರ್.
ಸಿಲ್ಕ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದ ಅಬ್ಬಥಾಯೂಬ್ 2013 ರಲ್ಲಿ ಅಖಿಲಾ ಬಾನು ರನ್ನ ಎರಡನೇ ವಿವಾಹವಾಗಿದ್ದ.ಮೊದಲ ಹೆಂಡತಿ ಮಕ್ಕಳಿಗೆ ನಾಲ್ವರು ಮಕ್ಕಳಿದ್ದರು.ಎರಡನೇ ಪತ್ನಿ ಅಖಿಲಾ ಬಾನು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಗುಣಮುಖರಾಗಿದ್ದರು.ಆದರೆ ಅಖಿಲಾಬಾನುಗೆ ಮಕ್ಕಳ ಯೋಗ ಇರಲಿಲ್ಲ.ಇತ್ತೀಚೆಗೆ ಅಖಿಲಾ ಬಾನು ಅಕ್ಕನ ಮಗ ಸೈಯದ್ ಇರ್ಫಾನ್ ರವರು ಚಿಕ್ಕಮ್ಮಳಿಗಾಗಿ ನಾಯ್ಡುನಗರದಲ್ಲಿ ಆರ್ಥಿಕ ನೆರವು ನೀಡಿ ಒಂದು ಮನೆ ಖರೀದಿಸಿಕೊಟ್ಟಿದ್ದರು.ಅಬ್ಬಥಾಯುಬ್ ಹಾಗೂ ಅಖಿಲಾ ಬಾನು ಇಬ್ಬರ ಹೆಸರಲ್ಲಿ ಮನೆಯ ಜಂಟಿ ಖಾತೆಯಾಗಿತ್ತು.
6 ತಿಂಗಳ ಹಿಂದಷ್ಟೆ ಮನೆ ಖರೀದಿಯಾಗಿತ್ತು.ಇತ್ತೀಚೆಗೆ ಮನೆಯನ್ನ ಮೊದಲ ಹೆಂಡತಿ ಮಕ್ಕಳಿಗೆ ಬರೆದು ಕೊಡಲು ಅಬ್ಬಥಾಯುಬ್ ಪ್ರಯತ್ನಿಸಿದ್ದ.ಈ ವಿಚಾರದಲ್ಲಿ ಗಂಡ ಹೆಂಡತಿ ಮಧ್ಯೆ ಆಗಾಗ ಗಲಾಟೆ ಆಗಿದೆ.ಫೆ.16 ರ ಬೆಳಿಗ್ಗೆ ಇದ್ದಕ್ಕಿದ್ದಂತೆ ಸೈಯದ್ ಇರ್ಫಾನ್ ಮನೆಗೆ ಬಂದ ಅಬ್ಬಥಾಯೂಬ್ ಕಣ್ಣೀರಿಡುತ್ತಾ ಅಖಿಲಾಬಾನು ಮೃತಪಟ್ಟಿದ್ದಾಳೆ ಎಂದು ತಿಳಿಸಿ ಗೋಳಾಡಿದ್ದ.ರಾಜೇಂದ್ರ ನಗರದ ಮನೆಯಲ್ಲಿ ಇರಿಸಲಾಗಿದ್ದ ಅಖಿಲಾಬಾನು ಶವವನ್ನ ಸೈಯದ್ ಇರ್ಫಾನ್ ಪರಿಶೀಲನೆ ಮಾಡಿದಾಗ ಕುತ್ತಿಗೆಯ ಮೇಲೆ ತರುಚಿದ ಗಾಯಗಳು ಕಂಡು ಬಂದಿದೆ.
ಇದರಿಂದ ಅನುಮಾನಗೊಂಡ ಸೈಯದ್ ಇರ್ಫಾನ್ ತಮ್ಮ ಚಿಕ್ಕಮ್ಮ ಸಾವು ಸಹಜವಲ್ಲ ಕೊಲೆ ಎಂದು ನಿರ್ಧರಿಸಿ ಅಬ್ಬ ಥಾಯುಬ್ ಹಾಗೂ ಮೊದಲ ಹೆಂಡತಿ ಮಕ್ಕಳಾದ ಮಹಮದ್ ಥೋಸಿಫ್,ಮಹಮದ್ ಆಸಿಫ್ ಹಾಗೂ ಮಹಮದ್ ಹೈದರ್ ಮೇಲೆ ಕೊಲೆ ಆರೋಪ ಹೊರೆಸಿ ಪ್ರಕರಣ ದಾಖಲಿಸಿದ್ದಾರೆ.ಸಧ್ಯ ಎನ್.ಆರ್.ಠಾಣಾ ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ