ಡಿ.ಪಾಲ್ ಕಾಲೇಜು, ಕೇಂದ್ರೀಯ ಹಿಂದಿ ಸಂಸ್ಥಾನ,ಆಗ್ರಾ, ಭಾರತ ಸರ್ಕಾರ, ಮತ್ತು ಪುಷ್ಪಾ ಹಿಂದಿ ವಿದ್ಯಾಲಯ, ಜೀವ್ ಸರ್ಕಾರೇತರ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಫೆಬ್ರುವರಿ ೧೬ ಮತ್ತು ೧೭ ರಂದು ‘ಆಧುನಿಕ ಕಾಲಘಟ್ಟದ ಸಾಹಿತ್ಯ ಹಿಂದಿ ಕನ್ನಡ ವಿಶೇಷ ಸಂದರ್ಭ’ (ಹಿಂದಿ ಕನ್ನಡ ತೌಲನಿಕ ಅಧ್ಯಯನ) ಎಂಬ ವಿಷಯದ ಕುರಿತು ಎರಡು ದಿನಗಳ ಅಂತರಾಷ್ಟ್ರೀಯ ವಿಚಾರಗೋಷ್ಠಿಗೆ ಚಾಲನೆ ದೊರಕಿದೆ.
ಹಿಂದಿ ಕನ್ನಡ ಭಾಷೆಗಳ ನಡುವೆ ನೂರಾರು ವರ್ಷಗಳಿಂದಲೂ ಕೊಡು ಕೊಳುವ ಪ್ರಕ್ರಿಯೆ ನಡೆದಿದ್ದು ಈ ಭಾಷೆಗಳ ನಡುವೆ ಪರಸ್ಪರ ಸಂಬAಧವಿದೆ, ಸಾಹಿತ್ಯದ ವಿಷಯದಲ್ಲೂ ಒಂದಕ್ಕೊAದು ಪ್ರೇರೇಪಿಸಲ್ಪಟ್ಟಿವೆ, ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹಿಂದಿ ಸಾಹಿತ್ಯದಲ್ಲಿ ಪ್ರಚುರಪಡಿಸುವ ನಿಟ್ಟಿನಲ್ಲಿ ಈ ವಿಚಾರಗೋಷ್ಠಿಯು ನಡೆಯುತ್ತಿದ್ದು ದೇಶದ ವಿವಿಧ ರಾಜ್ಯಗಳ ಪ್ರಸಿದ್ದ ಸಾಹಿತಿಗಳು ತಮ್ಮ ಪ್ರತಿಕ್ರಿಯೆಯಲ್ಲಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರೆಬ್ರುವರಿ ೧೬ ರಂದು ಬೆಳಿಗ್ಗೆ ೯.೩೦ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಪಂಜಾಬಿನ ಮಾಜಿ ಮಂತ್ರಿಗಳಾದ ಪ್ರೊ.ಲಕ್ಷಿö್ಮಕಾಂತ ಚಾವ್ಲ, ಕೇಂದ್ರಿಯ ಹಿಂದಿ ಸಂಸ್ಥಾನದ ನಿರ್ದೇಶಕ ಸುನಿಲ್ ಬಾಬುರಾವ್ ಕುಲಕರ್ಣಿ, ಕರ್ನಾಟಕದ ಮಾಜಿ ಡಿ.ಜಿ.ಪಿ ಗಳಾದ ಡಾ ಅಜಯ್ ಕುಮಾರ್ , ಐ.ಜಿ.ಪಿ ವಿಪುಲ್ ಕುಮಾರ್, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ.ಪ್ರಧಾನ ಗುರುದತ್, ನಿರಂಜನವಾನಳ್ಳಿ, ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ೪ ವಿವಿಧ ಗೋಷ್ಠಿಗಳು ನಡೆಯಲಿದ್ದು ಇಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಭಾಗವಹಿಸುವ ಸಂಶೋಧಕರು, ಪ್ರಾಧ್ಯಾಪಕರು, ವಿಧ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಮಂಡನೆ ಮಾಡಲಿದ್ದಾರೆ.