ಬೆಂಗಳೂರು : ಮಹಿಳೆಯರ ಸುರಕ್ಷತೆ ದೃಷ್ಟಿಯಲ್ಲಿ ಸರ್ಕಾರ ಯಾವುದೇ ರಾಜಿಯಿಲ್ಲ. ಮಹಿಳೆಯರ ಹಿತರಕ್ಷಣೆಗೆ ಬದ್ಧ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸಚಿವರ ಗೃಹ ಕಚೇರಿಯಲ್ಲಿಂದು ವಿವಿಧ ಮಹಿಳಾ ಸಂಘಟನೆಗಳು, ಲೈಂಗಿಕ ಅಲ್ಪಸಂಖ್ಯಾತರು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಸಚಿವರು, ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದರು.
ಸಚಿವರ ಭೇಟಿ ವೇಳೆ, ಜನವಾದಿ ಮಹಿಳಾ ಸಂಘಟನೆಯ ವಿಮಲಾ, ಒಂದೆಡೆ ಸಂಘಟನೆಯ ಅಕ್ಕಯ್ಯ ಪದ್ಮಸಾಲಿ, ರಕ್ಷಿತಾ, ಅಭಿದಾ, ಸಾಧನಾ ಮಹಿಳಾ ಸಂಘ, ಗಮನ ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.