ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾಮೂಹಿಕ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆಯನ್ನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು, 150ಕ್ಕೂ ಹೆಚ್ಚು ಮಕ್ಕಳು ಅಕ್ಷರಭ್ಯಾಸದಲ್ಲಿ ಪಾಲ್ಗೊಂಡಿದ್ದರು, ಮೈಸೂರಿನ ಅವನಿ ಶೃಂಗೇರಿ ಮಠದ ವೇದಬ್ರಹ್ಮ ನಾಗರಾಜ ಶಾಸ್ತ್ರಿಗಳ ನೇತೃತ್ವದಲ್ಲಿ ಸರಸ್ವತಿ ಪೂಜೆ ಪ್ರಾರಂಭಿಸಿ ಆನಂತರ ಪೋಷಕರು ಮಕ್ಕಳಿಗೆ ಕೈಹಿಡಿದು ಅಕ್ಕಿಯಲ್ಲಿ ಓಂಕಾರ ಮತ್ತು ಗಣೇಶನಾಮ ಹಾಗೂ ಕನ್ನಡದಲ್ಲಿ ಅ ಆ ಇ ಈ ಮುಂತಾದವುಗಳನ್ನು ಬರೆಸುವುದರ ಬರೆಯುವ ಮೂಲಕ ಅಕ್ಷರಭ್ಯಾಸ ಮಾಡಿಸಿದರು,
ಇದೇ ಸಂಧರ್ಭದಲ್ಲಿ ಮಹರ್ಷಿ ಶಿಕ್ಷಣ ಸಂಸ್ಥೆಯ ಕಾರ್ಯ ನಿರ್ವಾಹಣಾಧಿಕಾರಿ ತೇಜಸ್ ಶಂಕರ್ ರವರು ಮಾತನಾಡಿ ಪುರಾಣ ನಂಬಿಕೆಯ ಪ್ರಕಾರ ಸರಸ್ವತಿ ಪೂಜಾ ಪ್ರಕಾರ ಮಕ್ಕಳ ನಾಲಿಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಮಕ್ಕಳ ಶೈಕ್ಷಣಿಕ ಬದುಕು ಉತ್ತಮವಾಗಿರುತ್ತವೆ ಎಂಬ ನಂಬಿಕೆಯಿದೆ ಎಂದರು
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ರವರು ಮಾತನಾಡಿ ಸಾಮೂಹಿಕ ವಿವಾಹವನ್ನ ಸರಳ ರೀತಿಯಲ್ಲಿ ಸರ್ಕಾರದ ವತಿಯಿಂದ ತಂದಿರುವ ಸಪ್ತಪದಿ ಯೋಜನೆಯಂತೆ ಅಕ್ಷರಭ್ಯಾಸ ಕಾರ್ಯಕ್ರಮವನ್ನ ಶಿಕ್ಷಣ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಹಮ್ಮಿಕೊಳ್ಳುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ, ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲೆ ಕಲೆ ಕ್ರೀಡೆ ಸಾಂಸ್ಕೃತಿಕ ಸಂಗೀತ ಸೇರಿದಂತೆ ಯಾವ ಕ್ಷೇತ್ರದಲ್ಲಿ ಪ್ರತಿವಭಾವಂತರು ಎಂದು ಅರಿತು ಪ್ರಥಮ ಹಂತದಲ್ಲೆ ಪೋಷಕರು ಮನೆಯಿಂದ ಪ್ರೋತ್ಸಾಹ ನೀಡಬೇಕು ಮಕ್ಕಳು ಮುಖ್ಯವಾಹಿನಿಗೆ ಬಂದು ದೇಶದ ಅತ್ಯುತ್ತಮ ವ್ಯಕ್ತಿಯಾಗಿ ನಿರ್ಮಾಣವಗಾತ್ತಾರೆ ಎಂದರು,
ಪುರಾಣ ಇತಿಹಾಸದಲ್ಲಿರುವ ಪಾರ್ವತಿದೇವಿ ತನ್ನ ಮಗು ಗಣೇಶನಿಗೂ ಸಹ ಅಕ್ಷರಾಭ್ಯಾಸ ಕಲಿಸಿದ ಉಲ್ಲೇಖವಿದೆ, ಮಗು ಪೋಷಕರಿಂದ ಕಲಿತ ಮೊದಲ ಅಕ್ಷರದಲ್ಲಿರುವ ಆಸಕ್ತಿ, ಶ್ರಮಪಟ್ಟ ಕನಸನ್ನ ಕಂಡ ಪೋಷಕರು ಅದೇ ರೀತಿಯಲ್ಲೆ ಸನ್ಮಾರ್ಗದ ಕಡೆ ಮಗು ಬೆಳೆಯುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯವಾಗಿದೆ, ಶಿಕ್ಷಣಕ್ಕೆ ಎಂದು ಅಂತ್ಯವಿಲ್ಲ, ತಂತ್ರಜ್ಞಾನ ಮುಂದಿನ ಪೀಳಿಗೆ ಕಾಲಮಾನಕ್ಕೆ ತಕ್ಕಂತೆ ಪ್ರತಿದಿನ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಯುತ್ತಲೇಯಿರಬೇಕು, ಪ್ರತಿಯೊಬ್ಬರು ಶಿಕ್ಷಣ ಪಡೆದ ನಂತರದಲ್ಲಿ ಅದನ್ನ ಮತ್ತೊರ್ವರಿಗೆ ವಿದ್ಯಾದಾನ ಮಾಡಲು ಮುಂದಾಗಬೇಕು ಎಂದರು
ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್,
ಮಹರ್ಷಿ ಪಬ್ಲಿಕ್ ಶಾಲೆ ಸಿಇಓ ತೇಜಸ್ ಶಂಕರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ,ಸವಿತಾ ಘಾಟ್ಕೆ,
ಶಾಲೆಯ ಹಿರಿಯ ಪ್ರಾಂಶುಪಾಲರಾದ ಕೆ ಆರ್ ಗೋಪಾಲಸ್ವಾಮಿ, ಶಿಕ್ಷಕರಾದ ರಾಘವೇಂದ್ರ, ಪ್ರಿಯಾಂಕ, ಅನಿತಾ, ಹಾಗೂ ಇನ್ನಿತರರು ಹಾಜರಿದ್ದರು