ಮೈಸೂರು : ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ರೈಸ್ ಮಾರಟಕ್ಕೆ ನಗರದ ಹೆಬ್ಬಾಳದ ಕಾವೇರಿ ವೃತ್ತದ ಬಳಿ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.
ಅಕ್ಕಿ ಕೊಳ್ಳಲು ಮುಗಿಬಿದ್ದಿ ಜನ ನೂಕು ನುಗ್ಗಲು.
ಉಚಿತವಾಗಿ ಕೊಡುವಂತೆ ಅಕ್ಕಿ ಪಡೆಯಲು ಜನ ಜಾತ್ರೆ.
ಜನರನ್ನು ನೋಡಿ ತಬ್ಬಿಬ್ಬಾದ ಸಂಸದ ಪ್ರತಾಪ್ ಸಿಂಹ.
ಮುಂದಿನ ದಿನಗಳಲ್ಲಿ ಗೊಂದಲವಾಗದಂತೆ ವಿತರಣೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದ ಸಂಸದ ಪ್ರತಾಪ್ ಸಿಂಹ.
ದೇಶಾದ್ಯಂತ ಅಕ್ಕಿ ಬೆಲೆ ಏರಿಕೆ ಹಿನ್ನೆಲೆ.ಬಡ, ಮಧ್ಯಮ ವರ್ಗದ ಜನರಿಗೆ ಅಗ್ಗದ ದರದಲ್ಲಿ ಅಕ್ಕಿ ವಿತರಣೆಗೆ ಮುಂದಾದ ಪ್ರಧಾನಿ ಮೋದಿ. 1 ಕೆ.ಜಿಗೆ 29 ರೂ ನಂತೆ 10 ಕೆ ಜಿ ವಿತರಣೆ. ಭಾರತ್ ಬ್ರಾಂಡ್ ರೈಸ್ ನ ಪ್ರತ್ಯೇಕ ವಾಹನದ ಮೂಲಕ ಮಾರಾಟ. ಜನ ಸಾಮಾನ್ಯರಿಗೆ ಸಮರ್ಪಕವಾಗಿ ತಲುಪುವಲ್ಲಿ ಜನ ಪ್ರತಿನಿಧಿಗಳ ಗೊಂದಲ.ನಿರ್ಧಿಷ್ಟ ಜಾಗದಲ್ಲಿ ಮಳಿಗೆ ಮಾಡಿ ಕೊಟ್ಟರೆ ಸಮರ್ಪಕ ಹಂಚಿಕೆ ಮಾಡಬಹುದು. ಅಕ್ಕಿ ತರುವ ವಾಹನ ಬಂದು ನಿಂತಾಗ ಮುಗಿ ಬೀಳುವ ಜನ. ಎಲ್ಲಾ ಬಡ,ಮಧ್ಯಮ ವರ್ಗದ ಜನರಿಗೆ ಸಿಗುವುದೇ ಅನುಮಾನ.
ಒಬ್ಬರಿಗೆ ಒಂದು ಬ್ಯಾಗ್ ಎಂದು ಸಿಕ್ಕವರಿಗೆ ಸೀರುಂಡೆ ಎಂಬತೆ ಒಬ್ಬೊಬ್ಬ ಮೂರು ನಾಲ್ಕು ಬ್ಯಾಗ್ ಖರೀದಿ.
ಕೆಲವರು ಒಂದಕ್ಕಿಂತ ಹೆಚ್ಚು ಅಕ್ಕಿ ಕೊಂಡು ದುರುಪಯೋಗವಾಗು ಸಾಧ್ಯತೆ. ಸಂಬಂಧಪಟ್ಟವರು ಇತ್ತ ಗಮನ ವಹಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.