ಮೈಸೂರು : ಮೈಸೂರು ಗ್ರಾಮಾಂತರ ಒಬಿಸಿ ಮೋರ್ಚಾದಿಂದ ಬಿಜೆಪಿ ವಕ್ತಾರ ಡಾ.ವಸಂತ್ ಕುಮಾರ್ ಮತ್ತು ಪರುಶುರಾಮಪ್ಪ ಜಂಟಿ ಸುದ್ದಿ ಗೋಷ್ಠಿ ನಡೆಸಿದರು.
ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಇದೆ.
ಕಾಂಗ್ರೆಸ್ ಸೋಲೀನ ಭೀತಿಯಿಂದ ಕಾಂಗ್ರೆಸ್ ನಮ್ಮ ನಾಯಕರ ಮೇಲೆ ಏಕವಚನ ನಿಂದನೆ ಮಾಡುವ ಕೀಳು ಮಟ್ಟಕ್ಕೆ ಇಳಿದಿದೆ. ಬಹುಶ ಸೋಲಿನ ಹತಾಶೆಯಿಂದ ಈ ರೀತಿ ಮಾಡುತ್ತಿದ್ದಾರೆ. ಒಂದು ಡಿ ಕೆ ಸುರೇಶ್ ದೇಶ ವಿಭಜನೆಯ ದೇಶ ದ್ರೋಹ ಹೇಳಿಕೆಯನ್ನು ಕೊಡುತ್ತಾರೆ.
ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿಗಳ ಬಗ್ಗೆ ಏಕವಚನ ಮೋದಿ ಇಡೀ ರಾಷ್ರವನ್ನು ಅಭಿವೃದ್ಧಿ ಪಡಿಸುವ ದೆಸೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಐದು ಯೋಜನೆಗಳನ್ನು ಸಂಪೂರ್ಣ ಕೊಡಲಾಗದ ಸಿದ್ದರಾಮಯ್ಯ ಮೋದಿ ವಿರುದ್ಧ ಮಾತನಾಡುತ್ತಾರೆ
ಏಕವಚನದಲ್ಲಿ ಮಾತನಾಡುತ್ತಾರೆ ಹಿಟ್ಲರ್ ಅಂತಾರೆ.
ಕಾಂಗ್ರೆಸ್ ಇಂದು ಹತಾಶೆಯಿಂದ ಈ ರೀತಿ ಮಾಡ್ತಿದೆ
ಇದನ್ನು ಬಿಜೆಪಿ ಹಿಂದುಳಿದ ಮೋರ್ಚಾ ಖಂಡಿಸುತ್ತದೆ
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡ ವಸಂತ್ ಕುಮಾರ್ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಒಬಿಸಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಜಿ ಪರುಶುರಾಮಪ್ಪ ಮಾತನಾಡಿ, ರಾಹುಲ್ ಗಾಂಧಿ ಪಾದಯಾತ್ರೆ ಸಮಯದಲ್ಲಿ ಮೋದಿ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ. ಮೋದಿ ಮೇಲ್ವರ್ಗ ಜಾತಿ ಎಂದು ಅಪಮಾನ ಮಾಡಿದ್ದಾರೆ.ರಾಹುಲ್ ಗಾಂಧಿಯ ಈ ಹೇಳಿಕೆ ಖಂಡನೀಯ ಈ ಹೇಳಿಕೆ ಖಂಡಿಸಿ ಮುಂದಿನ ದಿನಗಳಲ್ಲಿ ಗ್ರಾಮ ಹಳ್ಳಿ ಪಟ್ಟಣ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.