ಆನಂದ್.ಕೆ.ಎಸ್
ಮೈಸೂರು : ಸಿಎಂ ಸಿದ್ದರಾಮಯ್ಯ ತವರು ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಾಗಿ ಶೋದ ಮುಂದುವರೆಸಿದೆ. ಕಳೆದ ಎರಡು ಬಾರಿ ಬಿಜೆಪಿ ಫೈರ್ ಬ್ರಾಂಡ್ ಪ್ರತಾಪ್ ಸಿಂಹ ಗೆಲುವು ದಾಖಲಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಬಾರಿ ಶಾತಯ ಗಾತಯ ಪ್ರತಾಪ್ ಸಿಂಹರನ್ನು ಸೋಲಿಸಲೇ ಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದ್ದು, ಪ್ರತಾಪ್ ಸಿಂಹ ಕಟ್ಟಿ ಹಾಕಲು ತಂತ್ರವನ್ನು ರೂಪಿಸಲಾಗುತ್ತಿದೆ. ಕೈ ಟಿಕೆಟ್ ಗಾಗಿ ಈಗಾಗಲೇ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗ್ರಾಮಾಂತರ ಅಧ್ಯಕ್ಷ ವಿಜಯ್ ಕುಮಾರ್, ಜೇಜೆ ಆನಂದ್, ಶೃಶ್ರೂತ್ ಗೌಡ ಲಾಭಿ ನಡೆಸಿದ್ದಾರೆ. ಅಲ್ಲದೆ ಸಿಎಂ ಪುತ್ರ ಯತೀಂದ್ರ ಹೆಸರು ಕೂಡ ಮುನ್ನಲೆಗೆ ಬಂದಿತ್ತು.
ಸಿಎಂ ಪುತ್ರ ಯತೀಂದ್ರ ಸ್ಪರ್ಧೆ ಮಾಡಿದರೆ ಹೇಗೆ ಎನ್ನುವ ಲೆಕ್ಕಾಚಾರವನ್ನು ಕೂಡ ಕಾಂಗ್ರೆಸ್ ಮಾಡಿದ್ದು, ಪರ ವಿರೋಧ ಚರ್ಚೆಗಳು ಕೂಡ ನಡೆದಿದೆ. ಅಲ್ಲದೆ ಶಾಸಕರ ಹಾಗೂ ಮಾಜಿ ಶಾಸಕರ ಅಭಿಪ್ರಾಯವನ್ನು ಕೂಡ ಸಿದ್ದರಾಮಯ್ಯ ಕಲೆ ಹಾಕಿದ್ದಾರೆ. ಯತೀಂದ್ರ ಸ್ಪರ್ದೆ ಮಾಡಬೇಕು ಎಂದು ಕೆಲ ಶಾಸಕರು ಸಿದ್ದರಾಮಯ್ಯ ಬಳಿ ಹೇಳಿದ್ದಾರೆ. ಇನ್ನು ಕೆಲವರು ಸ್ಪರ್ಧೆ ಬೇಡ ಎನ್ನುವ ಮಾತನ್ನು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಜಾತಿ ಲೆಕ್ಕಾಚಾರ
ಮೈಸೂರು ಕೊಡಗು ಕ್ಷೇತ್ರ ಹೇಳಿಕೆ ಕೇಳಿ ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರ, ಲಿಂಗಾಯತರು ಪರಿಶಿಷ್ಟ ಜಾತಿ ಪಂಗಡ, ಕುರುಬ, ಮುಸ್ಲಿಂ, ನಾಯಕ ಇತರ ಹಿಂದುಳಿದ ವರ್ಗದ ಜನರಿದ್ದಾರೆ. 2014,2019ರಲ್ಲಿ ಸಿದ್ದರಾಮಯ್ಯ ಕುರುಬ ಜನಾಂಗದ ವಿಶ್ವನಾಥ್ ಹಾಗೂ ವಿಜಯ್ ಶಂಕರ್ ಗೆ ಟಿಕೆಟ್ ನೀಡಿತ್ತು. ಅಲ್ಲದೆ ಇಬ್ಬರು ಕೂಡ ಸೋಲು ಕಂಡಿದ್ದರು. ಈ ಬಾರಿ ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕುವುದು ಬಹುತೇಕ ಪಕ್ಕವಾಗಿದೆ. ಸಚಿವರನ್ನು ಕಣಕ್ಕಿಳಿಸುವ ಪ್ಲಾನ್ ಮಾಡಿದ್ದ ಕಾಂಗ್ರೆಸ್ ಕೆ.ವೆಂಕಟೇಶ್ ಅವರನ್ನು ಸ್ಪರ್ಧೆಗೆ ಇಳಿಸುವ ತವಕದಲ್ಲಿತ್ತು ಆದರೆ ಸಚಿವ ವೆಂಕಟೇಶ್ ಸ್ಪರ್ಧೆಗೆ ನೋ ಎಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ತವರು ಕ್ಷೇತ್ರವನ್ನು ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ಸಿದ್ದರಾಮಯ್ಯ ಮಗನನ್ನು ಕಣಕ್ಕಿಳಿಸಿ ರಿಸ್ಕ್ ತೆಗೆದುಕೊಳ್ಳುತ್ತಾರಾ ? ಒಂದು ವೇಳೆ ಪುತ್ರನನ್ನು ಕಣಕ್ಕಿಳಿಸಲು ಒಪ್ಪಿದ್ರೆ ಮತ್ತೊಮ್ಮೆ ಸಿದ್ದರಾಮಯ್ಯ ಮೇಲೆ ಸ್ವಜಾತಿ ಪ್ರೇಮದ ಆರೋಪ ಬರುತ್ತದೆ. ಅಲ್ಲದೆ ಯತೀಂದ್ರ ಸ್ಪರ್ಧೆ ಮಾಡಿ ಸೋತರೆ ಮಗನ ಭವಿಷ್ಯದ ಮೇಲೂ ಪರಿಣಾಮ ಬೀರಲಿದ್ದು ಸಿದ್ದರಾಮಯ್ಯ ಅಳೆದು ತೂಗಿ ಈ ಬಾರಿ ಒಕ್ಕಲಿಗ ಸಮುದಾಯದ ಒಬ್ಬರಿಗೆ ಟಿಕೆಟ್ ಕೊಡುತ್ತಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಎಂ.ಲಕ್ಷ್ಮಣ್ ವಿಜಯ್ ಕುಮಾರ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ?
ಪ್ರತಾಪ್ ಸಿಂಹ ವಿರುದ್ಧ ಕಳೆದ ಐದು ವರ್ಷದಿಂದ ವಾಗ್ದಾಳಿ ಮಾಡುತ್ತಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹಾಗೂ ಸಂಘಟನಾಕಾರ ಬಿ.ಜೆ ವಿಜಯ್ ಕುಮಾರ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಡುವ ನಿರೀಕ್ಷೆ ಹೆಚ್ಚಿದೆ ಎಂದು ಕಾಂಗ್ರೆಸ್ ಆಪ್ತ ವಲಯದಿಂದ ರಾಜ್ಯಧರ್ಮ ಗೆ ಮಾಹಿತಿ ಲಭ್ಯವಾಗಿದೆ. ಯತೀಂದ್ರ ಸ್ಪರ್ಧೆಯಿಂದ ಹಿಂದೆ ಸರಿದರೆ ಈ ಇಬ್ಬರಲ್ಲಿ ಒಬ್ಬರಿಗೆ ಕಾಂಗ್ರೆಸ್ ಮಣೆ ಹಾಕಿ ಗೆಲ್ಲಿಸುಕೊಂಡು ಬರುವ ಲೆಕ್ಕಾಚಾರದಲ್ಲಿದೆ. ಕೊಡಗಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದು, ಮೈಸೂರಿನ ಹುಣಸೂರು, ಚಾಮುಂಡೇಶ್ವರಿ, ಕೆ.ಆರ್ ಕ್ಷೇತ್ರ ಹೊರತು ಪಡಿಸಿ ಉಳಿದ ಕಡೆ ಕಾಂಗ್ರೆಸ್ ಶಾಸಕರಿದ್ದು ಮತಗಳನ್ನು ಕ್ರೋಡೀಕರಿಸಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಇದ್ದಾರೆ.
ಬಿಜೆಪಿ ಜೆಡಿಎಸ್ ಮೈತ್ರಿ ಪ್ರತಾಪ್ ಸಿಂಹಗೆ ವರ
ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಹ್ಯಾಟ್ರಿಕ್ ಗೆಲುವು ಕಾಣುವ ನಿರೀಕ್ಷೆಯಲ್ಲಿರುವ ಪ್ರತಾಪ್ ಸಿಂಹಗೆ ಆನೆ ಬಲ ಬಂದಂತಾಗಿದೆ. ಮೈತ್ರಿ ಆಗುತ್ತಿದ್ದಂತೆ ದೊಡ್ಡ ಗೌಡರ ಆಶೀರ್ವಾದ ಪಡೆದ ಪ್ರತಾಪ್ ಸಿಂಹ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಆತ್ಮ ವಿಶ್ವಾಸದಲ್ಲಿ ಬೀಗುತ್ತಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ದಿ ಕೆಲಸ ನನ್ನ ಕೈ ಹಿಡಿಯುತ್ತದೆ. ಜನರು ನನ್ನ ಕೆಲಸ ಮೆಚ್ಚಿ ಈ ಬಾರಿಯೂ ಮತ ಹಾಕಲಿದ್ದಾರೆ. ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನನ್ನನ್ನು ಬೆಂಬಲಿಸಲಿದ್ದಾರೆ ಎಂದಿದ್ದಾರೆ. ಪ್ರಬಲ ಒಕ್ಕಲಿಗರ ಜಾನಂಗದ ಯುವ ನಾಯಕರಾಗಿರುವ ಪ್ರತಾಪ್ ಸಿಂಹ ಬಿಜೆಪಿಯ ಯುವ ಫೈರ್ ಬ್ರಾಂಡ್ ಹಾಗೂ ಪ್ರಬಲ ಹಿಂದುವಾದಿಯಾಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಕೆಲಸ ಮಾಡಿದ್ದೇನೆ ಯಾವ ಕೆಲಸದಲ್ಲಿಯೂ ನಾನು ಕಮಿಷನ್ ತೆಗೆದುಕೊಂಡಿಲ್ಲ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ಪದೇ ಪದೇ ಹೇಳಿ ಯುವಕರ ನೆಚ್ಚಿನ ನಾಯಕರಿದ್ದಾರೆ. ಸಂಸತ್ ಭವನದ ಅಟ್ಯಾಕ್ ನ ಲಾಭ ಪಡೆದು ಪ್ರತಾಪ್ ಸಿಂಹರನ್ನು ಕಟ್ಟಿಹಾಕಲು ಕಾಂಗ್ರೆಸ್ ಮಾಡಿದ ತಂತ್ರವು ಅಷ್ಟಾಗಿ ವರ್ಕ್ ಔಟ್ ಆಗಿಲ್ಲ. ಹೀಗಾಗಿ ಈ ಬಾರಿ ಪ್ರತಾಪ್ ಸಿಂಹ ಗೆಲುವು ಸುಲಭ ಎನ್ನುವುದು ರಾಜಕೀಯ ಪಂಡಿತರ ವಾದವಾಗಿದೆ.

