ಮೈಸೂರು : ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸರಿಂದ ವಾರ್ಡ್ ವಿಸಿಟ್ ನಡೆದಿದೆ.ನಗರದ 57 ವಾರ್ಡ್ ವ್ಯಾಪ್ತಿಯ ಮನೆ ಮನೆಗಳಿಗೆ ಶಾಸಕರು ಭೇಟಿ ನೀಡಿ
ಜನರ ಕುಂದುಕೊರತೆಗಳ ಆಲಿಸಿದ್ದಾರೆ.
ಮನೆ ಮನೆ ಬಾಗಿಲಿಗೆ ತೆರಳಿ ಮೂಲಭೂತ ಸಮಸ್ಯೆ ಆಲಿಕೆ ಮಾಡಿದ್ದಾರೆ.ನಗರದ ಕುವೆಂಪು ನಗರದ ಆರ್ಎಂಪಿ, ಎಂ ಬ್ಲಾಕ್ ನ ಮನೆ ಮನೆ ವಿಸಿಟ್ ಮಾಡಿದ ಶಾಸಕ ಶ್ರೀವತ್ಸ.ಬೆಳಂ ಬೆಳಗ್ಗೆನೇ ಪಾದಯಾತ್ರೆ ಮೂಲಕ ಕುಂದು ಕೊರತೆ ಆಲಿಸಿದ ಶಾಸಕ.ಶಾಸಕರ ಜೊತೆ ಸ್ಥಳೀಯ ಕಾರ್ಪೋರೇಟ್ ಎಂಸಿ ರಮೇಶ್, ರಾಜೇಶ್, ವೆಂಕಟೇಶ್ ದಾಸ್,ರವಿ ಕಮಲಮ್ಮ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.