ಚಾಮರಾಜನಗರ: ಚಿಕ್ಕಲ್ಲೂರು ಜಾತ್ರೆಗೆ ಭಕ್ತರನ್ನು ಕೊಂಡೊಯ್ಯುತ್ತಿದ್ದ ಗೂಡ್ಸ್ ಆಟೋ ಕೆ ಎಸ್ ಆರ್ ಟಿ.ಸಿ ಬಸ್ ಗೆ ಮುಖಾಮುಕಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೆ ಮೃತಪಟ್ಟು ಇಬ್ಬರು ತೀವ್ರ ತರ ಗಾಯಗಳಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಚಾಮರಾಜನಗರ ಜಿಲ್ಲೆಯ ಲಕ್ಕೂರು ಬಳಿ ಶನಿವಾರ ಮದ್ಯಾಹ್ನ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಿಂದ 4 ಗೂಡ್ಸ್ ಆಟೋದಲ್ಲಿ ಚಿಕ್ಕಲ್ಲೂರು ಜಾತ್ರೆಗೆ ಭಕ್ತರು ತೆರಳುವಾಗ ಮೂರನೇ ಆಟೋ ಅತಿಯಾದ ವೇಗದಿಂದಾಗಿ ಓವರ್ ಟೆಕ್ ಮಾಡಲು ಮುನ್ನುಗಿದಾಗ ಚಾಮರಾಜನಗರ ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಿದ್ದರಾಜು @ ಕುಮಾರ ಬಿನ್ ಜವರಯ್ಯ (33) ಸ್ಥಳದಲ್ಲೇ ಸಾವನ್ನಪಿದರು. ಇನ್ನರಿಗೆ ತೀವ್ರತರ ಗಾಯಗಳಾಗಿದ್ದು ಚಾಮರಾಜನಗರ ಸಿಮ್ಸ್ ಆಸ್ಪತ್ರೆ ಗೆ ಸಾಗಿಸಲಾಗಿದೆ.ತೆರಕಣಾಂಬಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.